Rain | ಯಾದಗಿರಿಯಲ್ಲಿ ಭಾರಿ ಮಳೆ : ಜಮೀನುಗಳು ಜಲಾವೃತ
ಯಾದಗಿರಿ : ರಾಜ್ಯಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ.
ಇನ್ನೂ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅದರಂತೆ ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ.
ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಜೊತೆಗೆ ಹಲವು ಗ್ರಾಮಗಳು ನಡುಗಡ್ಡೆಗಳಾಗಿದ್ದು, ಜಮೀನುಗಳು ಜಲಾವೃತಗೊಂಡಿವೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿ ಅಗ್ನಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡಿವೆ.
ಅಗ್ನಿ, ಮುದನೂರ, ಕೆಂಭಾವಿ, ನಗನೂರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ತತ್ತರಿಸಿದ್ದಾರೆ.
ಇತ್ತ ಮಳೆ ನೀರಿಗೆ ಹತ್ತಿ, ಭತ್ತ, ತೊಗರಿ ಬೆಳೆ ನಾಶವಾಗಿದೆ. ಇದರು ರೈತರು ಕಂಗಾಲಾಗಿದ್ದಾರೆ. Rain Heavy rains in Yadagiri Lands flooded