Rain | ಪಾವಗಡ ಸೋಲಾರ್ ಪಾರ್ಕ್ ಮುಳುಗಡೆ
ತುಮಕೂರು : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಪಾವಗಡದಲ್ಲಿರುವ ವಿಶ್ವದ ಮೊದಲ ಬೃಹತ್ ಸೌರ ವಿದ್ಯುತ್ ಘಟಕ ಜಲಾವೃತಗೊಂಡಿದೆ.
ಸೋಲಾರ್ ಪಾರ್ಕ್ ನಲ್ಲಿ ನೀರು ತುಂಬಿಕೊಂಡಿರುವುದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟಕಕ್ಕೆ ಆಗುವ ಆತಂಕ ಎದುರಾಗಿದೆ.
ನಿರಂತರ ಮಳೆಯಿಂದಾಗಿ ಕ್ಯಾದಗಾನಕೆರೆ ಕೋಡಿ ಹೊಡೆದು ನೀರು ಸೋಲಾರ್ ಪಾರ್ಕ್ ಗೆ ನುಗ್ಗಿದೆ.
ಜಲಾವೃತಗೊಂಡ ಪ್ರದೇಶಗಳನ್ನು ಹೊರತುಪಡಿಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ.

ಪ್ರತಿ ಬ್ಲಾಕ್ ನಲ್ಲಿ ಬೃಹತ್ ವಿದ್ಯುತ್ ಪೂರೈಕೆಯ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಅವಘಡದ ಆತಂಕ ಮನೆ ಮಾಡಿದೆ.
ನಾಗಲಮಡಿಕೆ ಹೋಬಳಿ ತಿರುಮಣಿಯಲ್ಲಿ 12,500 ಎಕರೆ ಭೂ ಪ್ರದೇಶದಲ್ಲಿ 2,000 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಘಟಕ ಇದೆ.
ಇದರಲ್ಲಿ ಅವಾದ ಕಂಪನಿಯ 4ನೇ ಬ್ಲಾಕ್ ನಲ್ಲಿ 30 ಎಕರೆಗೂ ಹೆಚ್ಚು ವಿದ್ಯುತ್ ಉತ್ಪಾದನಾ ಸ್ಥಾವನ ಮುಳುಗಡೆಯಾಗಿದೆ.