ತುಂಬಿ ಹರಿಯುತ್ತಿದೆ ತುಂಗಭದ್ರಾ
ಕೊಪ್ಪಳ : ರಾಜ್ಯದ ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಸಮೀಪದ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ತುಂಗಭದ್ರಾ ಜಲಾಶಗದಿಂದ ನದಿಗೆ ಸದ್ಯ 1 ಲಕ್ಷದ 4 ಸಾವಿರದ 755 ಕ್ಯೂಸೆಕ್ ಲೀಟರ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ.
ತಾಸಿಗೆ 1 ಲಕ್ಷದ 4 ಸಾವಿರದ 755 ಕ್ಯೂಸೆಕ್ ಒಳಹರಿವಿದ್ದು , 28 ಕ್ರಸ್ಟ್ ಗೇಟ್‌ಗಳ ಮೂಲಕ ಜಲಾಶಯಕ್ಕೆ ನೀರು ಬಿಡುಗಡೆ ಮಾಡಲಾಗುತ್ತಿದೆ.

20 ಕ್ರಸ್ಟ್ ಗೇಟ್‌ಗಳನ್ನು 2.50 ಅಡಿ ಎತ್ತರಿಸಿ , 8 ಗೇಟ್ ಗಳನ್ನು 1.50 ಅಡಿ ಎತ್ತರಿಸಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ವರ್ಷದ ಮೊದಲ ಹಂಗಾಮಿನಲ್ಲೇ ಜಲಾಶಯ ಎರಡು ಸಲ ಭರ್ತಿ ಆಗಿದ್ದು ಅಪರೂಪ ಎಂದು ಹೇಳಲಾಗುತ್ತಿದೆ.
ಒಳ ಹರಿವಿನ ಪ್ರಮಾಣ ಹೆಚ್ಚಾದರೆ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಎದುರಾಗಲಿದೆ ಎಂದು ಹೇಳಲಾಗುತ್ತಿದೆ .