ಅಪೂರ್ಣವಾಗಿ ಉಳಿದ ರಾಜ್ ‍ಕಪೂರ್ – ನರ್ಗಿಸ್ ಪ್ರೇಮ್ ಕಹಾನಿ

1 min read
Raj kapoor was in love with nargis but she broke his heart

ಅಪೂರ್ಣವಾಗಿ ಉಳಿದ ರಾಜ್ ‍ಕಪೂರ್ – ನರ್ಗಿಸ್ ಪ್ರೇಮ್ ಕಹಾನಿ

ರಾಜ್ ‍ಕಪೂರ್ ಬಾಲಿವುಡ್ ಕಂಡ ಅಪ್ರತಿಮ ಪ್ರತಿಭಾವಂತ ನಟ ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ. ಆದರೆ ವಿವಾಹಿತರಾಗಿದ್ದ ರಾಜ್ ಕಪೂರ್ ಅವರ ವೈಯಕ್ತಿಕ ಜೀವನ ಬಾಲಿವುಡ್ ನಟಿ ನರ್ಗಿಸ್ ಅವರೊಂದಿಗಿನ ಪ್ರೇಮದಿಂದ ಸುದ್ದಿಯಲ್ಲಿತ್ತು.
ಇಬ್ಬರ ನಡುವಿನ ಪ್ರೀತಿಯನ್ನು ಅವರಿಬ್ಬರು ನಟಿಸಿದ ಚಿತ್ರಗಳಲ್ಲಿಯೂ ಸ್ಪಷ್ಟವಾಗಿ ಕಾಣಬಹುದು. ಚಲನಚಿತ್ರ ಪರದೆಯಲ್ಲಿ ಅವರ ಕೆಮಿಸ್ಟ್ರಿ ಅತ್ಯುತ್ತಮವಾಗಿತ್ತು. ಈ ಇಬ್ಬರು ಸುಮಾರು 9 ವರ್ಷಗಳ ಕಾಲ ಪ್ರೇಮದ ಬಲೆಗೆ ಸಿಲುಕಿದ್ದರು.‌ ಆದರೆ ನರ್ಗಿಸ್, ಮದರ್ ಇಂಡಿಯಾ ಚಿತ್ರದ ಸಹನಟ ಸುನಿಲ್ ದತ್ ಅವರನ್ನು ಮದುವೆಯಾದಾಗ ಇವರಿಬ್ಬರ ಸಂಬಂಧವು ಕೆಟ್ಟ ತಿರುವು ಪಡೆಯಿತು.

ದೀರ್ಘಕಾಲದವರೆಗೆ ದುಃಖದಲ್ಲಿ ಮುಳುಗಿದ ನಂತರ, ರಾಜ್ ಕಪೂರ್ ಅವರು ಈ ಮೊದಲೇ ಕೃಷ್ಣ ರಾಜ್ ಅವರನ್ನು ಮದುವೆಯಾಗಿದ್ದರಿಂದ ತಮ್ಮನ್ನು ತಾವು ನಿರ್ವಹಿಸಿಕೊಳ್ಳಬೇಕಾಯಿತು ಮತ್ತು ಮಕ್ಕಳ ಪಾಲನೆಗೂ ಸಹಕರಿಸಬೇಕಾಯಿತು.
Raj kapoor was in love with nargis but she broke his heart

ಒಂಬತ್ತು ವರ್ಷಗಳ ಪ್ರೇಮ ಸಂಬಂಧದ ನಂತರ, ನರ್ಗಿಸ್ ರಾಜ್ ಕಪೂರ್ ಅವರನ್ನು ಮದುವೆಯಾಗಲು ಬಯಸಿದ್ದರು ಎಂದು ಹೇಳಲಾಗುತ್ತದೆ. ರಾಜ್ ಕಪೂರ್ ಸ್ವತಃ ನರ್ಗಿಸ್ ಅವರನ್ನು ಮದುವೆಯಾಗುವುದಾಗಿ ಹಲವಾರು ಬಾರಿ ಭರವಸೆ ನೀಡಿದರು. ಆದರೆ ರಾಜ್ ಕಪೂರ್ ಅವರಿಗೆ ಅದು ಸಾಧ್ಯವಾಗಲಿಲ್ಲ. ಆಗ ರಾಜ್ ಕಪೂರ್ ಸಹ ಯೋಚಿಸದ ರೀತಿಯಲ್ಲಿ ನರ್ಗಿಸ್ ನಿರ್ಧಾರವನ್ನು ತೆಗೆದುಕೊಂಡರು. ಸುರ್ನಿಲ್ ದತ್ ಅವರೊಂದಿಗೆ ನರ್ಗಿಸ್ ಮದುವೆಯಾದ ಸುದ್ದಿ ಕೇಳಿದ ರಾಜ್ ಕಪೂರ್ ಕುಸಿದು ಹೋದರು. ಮಾಧ್ಯಮ ವರದಿಗಳ ಪ್ರಕಾರ, ಅವರು ತುಂಬಾ ಅಳುತ್ತಿದ್ದರು ಮತ್ತು ಸುಡುವ ಸಿಗರೇಟಿನಿಂದ ತನ್ನನ್ನು ತಾನೇ ಸುಟ್ಟುಕೊಂಡಿದ್ದರು. ಇದಲ್ಲದೆ ರಾಜ್ ಕಪೂರ್ ಸಾಕಷ್ಟು ಮದ್ಯಪಾನ ಕೂಡ ಮಾಡಲು ಪ್ರಾರಂಭಿಸಿದರು.

ಮದರ್ ಇಂಡಿಯಾ’ ಎಂಬ ಅಧ್ಬುತ ಸಿನಿಮಾ ನರ್ಗಿಸ್ ಅವರ ಜೀವನದ ದಿಕ್ಕು ಬದಲಾಗಲು ಕಾರಣವಾಯಿತು.

ರಾಜ್ ಕಪೂರ್ ನಿಂದ ಬೇರೆಯಾಗಲು ನಿರ್ಧರಿಸಿದ್ದ ನರ್ಗಿಸ್ ಮದರ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ತೀರ್ಮಾನಿಸಿದರು. ‌ ರಾಜ್ ಕಪೂರ್ ಪ್ರಕಾರ, ನರ್ಗೀಸ್ ಆ ಚಿತ್ರದಲ್ಲಿ ಅಭಿನಯಿಸಲು ನಿರ್ಧರಿಸಿದಾಗ, ಆಕೆಗೆ ಸಿನಿಮಾ ದ ಹೆಸರೊಂದನ್ನು ಬಿಟ್ಟರೆ, ಉಳಿದ ಯಾವ ಸಂಗತಿಗಳ ಬಗ್ಗೆಯೂ ತಿಳಿದಿರಲಿಲ್ಲ.
Raj kapoor was in love with nargis but she broke his heart

ಮದರ್ ಇಂಡಿಯಾ ಚಿತ್ರೀಕರಣದಲ್ಲಿ ಸಂಭವಿಸಿದ ಅವಘಡವೊಂದು ನರ್ಗೀಸ್ ಹಾಗೂ ಸುನೀಲ್ ದತ್ತರ ಸಂಬಂಧಕ್ಕೆ ಮುನ್ನುಡಿ ಬರೆಯಿತು. ಒಣ ಹುಲ್ಲಿನ ಬಣವೆಗಳಿಗೆ ಬೆಂಕಿಯಿಟ್ಟು ಚಿತ್ರೀಕರಣ ಮಾಡುವಾಗ ಬೀಸಿದ ಗಾಳಿಯಿಂದ ಹೊತ್ತಿಕೊಂಡ ಬೆಂಕಿಯ ಮಧ್ಯೆ ನರ್ಗೀಸ್ ಸಿಲುಕಿಕೊಂಡರು. ತಕ್ಷಣವೇ ಸುನೀಲ್ ದತ್ತ್ ಬೆಂಕಿಯ ಮಧ್ಯೆ ಧುಮುಕಿ ನರ್ಗೀಸ್ ಅವರನ್ನು ಉರಿಯುವ ಬೆಂಕಿಯಿಂದ ಪಾರು ಮಾಡಿದರು. ಇದು ಜೀವ ಉಳಿಸಿದ ಸುನೀಲ್ ದತ್ತ ನೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಿತ್ತು. ಆ ಬಳಿಕ ಒಮ್ಮೆ ಆಕಸ್ಮಾತ್ ಆಗಿ ರಾಜ್ ಕಪೂರ್ ನರ್ಗೀಸ್ ರನ್ನು ಭೇಟಿಯಾಗುತ್ತಾರೆ. ಮುರಿದು ಬಿದ್ದ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡಿದ ರಾಜ್ ಕಪೂರ್ ನರ್ಗೀಸ್ ರ ಕೈಹಿಡಿದು ಮರಳಿ ಬರುವೆಯಾ ನನ್ನ ಹೃದಯ ಸಾಮ್ರಾಜ್ಯಕ್ಕೆ ಎಂದು ಕೇಳಿದಾಗ ಕಂಡ ಕನಸುಗಳನ್ನೆಲ್ಲಾ ಹೆಡೆಮುರಿ ಕಟ್ಟಿ ಸಮಾಧಿ ಮಾಡಿದ್ದ ನರ್ಗೀಸ್, ನಿನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿರು ಎಂದು ಹೇಳುತ್ತಾರೆ.

ದೀರ್ಘಕಾಲದವರೆಗೆ ದುಃಖದಲ್ಲಿ ಮುಳುಗಿದ ನಂತರ, ರಾಜ್ ಕಪೂರ್ ನಂತರ ತಮ್ಮನ್ನು ತಾವು ನಿರ್ವಹಿಸಿಕೊಳ್ಳಬೇಕಾಯಿತು. ಇದಲ್ಲದೆ, ‘ಮೇರಾ ನಾಮ್ ಜೋಕರ್’ ಎಂಬ ಚಿತ್ರ ‌ ಫ್ಲಾಪ್ ಆದ ನಂತರ, ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯೂ ರಾಜ್ ಕಪೂರ್ ಅವರ ತಲೆಯ ಮೇಲಿತ್ತು.
ಮೇರಾ ನಾಮ್ ಜೋಕರ್ ಚಿತ್ರದಿಂದ ಎಲ್ಲವನ್ನೂ ಕಳೆದುಕೊಂಡಿದ್ದ ರಾಜ್​ಕಪೂರ್ ಅವರಿಗೆ ಸಂಸಾರ ಮತ್ತು ಮಕ್ಕಳ ಪಾಲನೆಯನ್ನು ನಿರ್ವಹಿಸಬೇಕಾಯಿತು. ಆಗ ಅವರು ತನ್ನ ಮತ್ತು ನರ್ಗಿಸ್ ರ ಮೊದಲ ಭೇಟಿಯನ್ನು ತೋರಿಸುವ ಕಡಿಮೆ ಬಜೆಟ್ ನ ‘ಬಾಬಿ’ ಚಿತ್ರವನ್ನು ಮಾಡಿ ಮತ್ತೆ ಯಶಸ್ಸಿನ ಶಿಖರ ಏರಿದರು.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ

#Rajkapoor #nargis

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd