ರಾಜ್ ಕುಮಾರ್’ಗೆ ಅವಮಾನ : ತನಿಖೆಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಬೆಂಗಳೂರು : ಗೂಗಲ್ ನಿಂದ ಕನ್ನಡ ಕಣ್ಮಣಿ ವರನಟ ರಾಜ್ ಕುಮಾರ್ ಗೆ ಅಪಮಾನ ಮಾಡಲಾಗಿದೆ. ಈ ಬಗ್ಗೆ ತನಿಖೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ಕನ್ನಡ ಆಯ್ತು, ಈಗ ಕನ್ನಡಿಗರ ಕಣ್ಮಣಿ ರಾಜ್‍ಕುಮಾರ್ ಅವರ ವಿಚಾರದಲ್ಲಿ ಅಪಮಾನ ಆಗುತ್ತಿದೆ.
ಇವೆಲ್ಲ ಯಾಕಾಗುತ್ತಿವೆ, ಯಾರು ಮಾಡುತ್ತಿದ್ದಾರೆ, ಕನ್ನಡಿಗರಿಗೇ ಹೀಗೆ ಏಕೆ ಆಗುತ್ತಿದೆ, ಬೇರೆ ಭಾಷೆಗಿಲ್ಲದ ಪ್ರಾರಬ್ದ ನಮಗೇ ಏಕೆ?
ಇಂಥ ಅಪಸವ್ಯಗಳ ಕಡೆಗೆ ಸರ್ಕಾರಗಳು ಪರಿಣಾಮಕಾರಿಯಾಗಿ ನಡೆದುಕೊಳ್ಳಬೇಕು, ಸಂಬಂಧಪಟ್ಟವರು ಸೂಕ್ಷ್ಮವಾಗಬೇಕು.
ಡಾ. ರಾಜ್‍ಕುಮಾರ್ ಅವರಿಗೆ ಅಪಮಾನ ಮಾಡಿದ್ದು, ಕನ್ನಡ ಕೆಟ್ಟ ಭಾಷೆ ಎಂದು ಕರೆದಿದ್ದು, ಕನ್ನಡದ ಧ್ಜಜಕ್ಕೆ ಅಪಮಾನ ಮಾಡಿದ್ದು ಎಲ್ಲವೂ ಅಂತರ್ಜಾಲ ವೇದಿಕೆಯಲ್ಲಿಯೇ.
ಈ ಪ್ರಕರಣಗಳ ಹಿಂದೆ ಯಾರೋ ಕನ್ನಡ ವಿರೋಧಿ ಪಟ್ಟಭದ್ರರು ಇದ್ದಂತೆ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ಗಂಭೀರವಾಗಿ ತನಿಖೆಗಳಾಗಬೇಕು. ಆ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.