ದಿನೇ ದಿನೇ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಯಾರನ್ನೂ ಬಿಟ್ಟಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು, ಕಲಾವಿದರು , ಸಿನೆಮಾ ನಟರನ್ನೂ ಬೆಂಬಿಡದೆ ಕಾಡುತ್ತಿದೆ ಈ ಮಹಾಮಾರಿ. ಇದೀಗ ಬಾಹುಬಲಿ ಪ್ರಖ್ಯಾತಿಯ ಖ್ಯಾತ ನಿರ್ದೇಶಕರಾದ ರಾಜಮೌಳಿಗೂ ಕೊರೊನಾ ಮಾಹಾಮಾರಿ ಒಕ್ಕರಿಸಿದೆ. ಈ ವಿಚಾರವನ್ನು ಸ್ವತಃ ರಾಜಮೌಳಿಯವರೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ರಾಜಮೌಳಿ ಅಷ್ಟೇ ಅಲ್ಲದೇ ಅವರ ಕುಟುಂಬದ ಸದಸ್ಯರಿಗೂ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ. ಕೆಲವು ದಿನಗಳಿಂದ ರಾಜಮೌಳಿಯರು ಜ್ವರದಿಂದ ಬಳಲುತ್ತಿದ್ದರು. ಆದ್ರೆ ಕ್ರಮೇಣ ಜ್ವರ ವಾಸಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪರಿವಾರದವರೆಲ್ಲರೂ ಕೊರೊನಾ ಪರೀಕ್ಷೆ ಮಾಡಿಕೊಂಡಾಗ , ಅವರೆಲ್ಲರಲ್ಲೂ ಪಾಸಿಟಿವ್ ಇರುವುದು ಗೊತ್ತಾಗಿದೆ. ಸದ್ಯ ರಾಜಮೌಳಿ ಕುಟುಂಬದ ಎಲ್ಲರೂ ಚಿಕಿತ್ಸೆಗೆ ಒಳಗಾಗಿದ್ದಾರೆ.
ಶ್ರಾವಣ ಶುಕ್ರವಾರ ಮಹಾಲಕ್ಷ್ಮಿ ಪೂಜೆ: ಸಂಪತ್ ಗೌರಿ ವ್ರತ ಆಚರಿಸುವುದು ಹೇಗೆ? ಇಲ್ಲಿದೆ ಪೂಜಾ ವಿಧಿ ಮತ್ತು ಕಥೆ
ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ . ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್...








