ರಾಜಮೌಳಿ ವಿರುದ್ಧ ಸಿಟ್ಟಾಗಿದ್ಯಾಕೆ ‘ಭೀಮ್ಲಾನಾಯಕ’ನ ಫ್ಯಾನ್ಸ್..!
ಬೆಂಗಳೂರು : ‘ಬಾಹುಬಲಿ’ ಸಿನಿಮಾ ಮೂಲಕ ಬಾಲಿವುಡ್ ಮಂದಿಯನ್ನು ಬೀಳಿಸಿ ಸೌತ್ ಇಂಡಿಯನ್ ಸಿನಿಮಾ ತಾಕತ್ತು ತೋರಿಸಿದ್ದ ರಾಜಮೌಳಿ.. ಸದ್ಯ ರಾಜಮೌಳಿ ಸಾರಥ್ಯದ ,ರಾಮಚರಣ್ , ಜ್ಯೂನಿಯರ್ NTR ನಟನೆಯ ಬಹುನಿರೀಕ್ಷೆಯ “RRR” ಸಿನಿಮಾ ರಿಲೀಸ್ ಆಗಬೇಕಿದೆ..
ಈ ನಡುವೆ RRR ಸಿನಿಮಾಗೆ ಬೆಚ್ಚಿ ಖುದ್ದು ಅಮಿರ್ ಖಾನ್ ತಮ್ಮ ಸಿನಿಮಾ ‘ಲಾಲ್ ಸಿಂಗ್ ಚಡ್ಡಾ’ ಮುಂದೂಡಿದ್ದರು.. ನತ್ತೊಂದು ಬಹುನಿರೀಕ್ಷೆಯ ಸಿನಿಮಾ ‘ಗಂಗೂಬಾಯಿ ಕಾಥೇಯವಾಡಿ’ ಕೂಡ ಮುಂದೂಡಿಕೆಯಾಗಿದೆ.. ಅಷ್ಟೇ ಅಲ್ಲ ಪವನ್ ಕಲ್ಯಾಣ್ ನಟನೆಯ “ಭೀಮ್ಲಾನಾಯಕ್” ಹಾಗೂ ಮಹೇಶ್ ಬಾಬು ನಟನೆಯ “ಸರ್ಕಾರಿ ವಾರು ಪಾಟ” ಸಿನಿಮಾ ರಿಲೀಸ್ ಡೇಟ್ ಸಹ ಮುಂದೂಡಿಕೆಯಾಗಿದೆ. ಆದ್ರೀಗ ಇದೇ ಕಾರಣಕ್ಕೆ ಪವನ್ ಕಲ್ಯಾಣ್ ಫ್ಯಾನ್ಸ್ ರಾಜಮೌಳಿ ವಿರುದ್ಧ ಆಕ್ರೋಶಗೊಂಡಿದ್ದಾರೆ..
ಹೌದು.. ಭೀಮ್ಲ ನಾಯಕ್’ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಬೇಕಿತ್ತು . ಆದರೆ ರಾಜಮೌಳಿ ಹಾಗೂ ಅವರ ‘RRR’ ಸಿನಿಮಾ ತಂಡದ ಮನವಿಯಿಂದಾಗಿ ಭೀಮ್ಲಾನಾಯಕ್ ಬಿಡುಗಡೆ ಮುಂದೂಡಲಾಗಿದೆ. ಇದು ಪವನ್ ಕಲ್ಯಾಣ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ..
RRR ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸುವಾಗ ಯಾವ ನಿರ್ಮಾಪಕರನ್ನೂ ಸಂಪರ್ಕಿಸದೇ ಇದ್ದ ರಾಜಮೌಳಿ ಇದೀಗ ತಮ್ಮ ಸಿನಿಮಾ ಬಿಡುಗಡೆಗಾಗಿ ನಿರ್ಮಾಪಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ..
ಅಲ್ಲದೇ ಭೀಮ್ಲ ನಾಯಕ್ ಸಿನಿಮಾದ ಬಿಡುಗಡೆ ಮುಂದೂಡಿಕೆ ನಿರ್ಮಾಪಕ ಸೂರ್ಯದೇವರ ನಾಗವಂಶಿ ಅವರಿಗೆ ಇಷ್ಟವಿರಲಿಲ್ಲ. ಆದರೆ ನಿರ್ಮಾಪಕ ದಿಲ್ ರಾಜು ಮೂಲಕ ಒತ್ತಡ ಹೇರಿಸಿ ಭೀಮ್ಲ ನಾಯಕ್ ಸಿನಿಮಾದ ಬಿಡುಗಡೆ ಮುಂದೂಡುವಂತೆ ರಾಜಮೌಳಿ ಮಾಡಿದ್ದಾರೆ. ನಿನ್ನೆ ನಡೆದ ನಿರ್ಮಾಪಕರ ಸಭೆಗೆ ಆಗಮಿಸಿದ್ದ ಸೂರ್ಯದೇವರ ನಾಗವಂಶಿ ಅರ್ಧದಲ್ಲಿಯೇ ಎದ್ದು ಹೋದರು. ಆ ಬಳಿಕ ನಿರ್ಮಾಪಕ ದಿಲ್ ರಾಜ್, ಭೀಮ್ಲ ನಾಯಕ್ ಸಿನಿಮಾವನ್ನು ಮುಂದೂಡಲಾಗಿರುವ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು. ಹೀಗೆ ಒತ್ತಡ ಹೇರಿ ಭೀಮ್ಲಾನಾಯಕ್ ಸಿನಿಮಾ ಮುಂದೂಡುವಂತೆ ಮಾಡಿ ನಂತರ ಟ್ವೀಟ್ ಮೂಲಕ ರಾಜಮೌಳಿ ಧನ್ಯವಾದಗಳನ್ನ ತಿಳಿಸಿದ್ದಾರೆಂಬುದು ಪವನ್ ಕಲ್ಯಾಣ್ ಅಭಿಮಾನಿಗಳ ಆರೋಪ..
“KGF” ಮೇಲೆ ನಮಗೆ ಹೆಮ್ಮೆ ಇದೆ.. “ವಿಕ್ರಾಂತ್ ರೋಣ”ನ ಮೇಲೆ ಅವರು ಹೆಮ್ಮೆ ಪಡುವಂತೆ ಮಾಡ್ತೇವೆ : ಸುದೀಪ್
ಮತ್ತೊಂದ್ ಕಡೆ ರಾಜಮೌಳಿ ಅವರ ಯಾವುದೇ ಒತ್ತಡಗಳಿಗೂ ಬಗ್ಗಿಲ್ಲ ಪ್ರಭಾಸ್ ನಟನೆಯ ರಾಧೆ-ಶ್ಯಾಮ್ ಸಿನಿಮಾ ಟೀಮ್.. ಬಿಡುಗಡೆ ದಿನಾಂಕ ಮುಂದೂಡಲು ಒಪ್ಪಿಕೊಂಡಿಲ್ಲ. ರಾಧೆ-ಶ್ಯಾಮ್ ಸಿನಿಮಾವು ಜನವರಿ 12 ರಂದು ತೆರೆಗೆ ಬರುವುದು ಪಕ್ಕಾ ಎನ್ನಲಾಗ್ತಿದೆ.. ಅಲ್ಲದೇ ಮೂಲಗಳ ಪ್ರಕಾರ ಇದೇ ವಿಚಾರಕ್ಕೆ ಪ್ರಭಾಸ್ ಹಾಗೂ ರಾಜಮೌಳಿ ನಡುವೆ ಭಿನ್ನಾಭಿಪ್ರಾಯಗಳಿವೆ..








