ಬಾಲಿವುಡ್ ನ ‘ಬ್ಯಾಡ್ ಬಾಯ್’ ಗೆ ಆಕ್ಷನ್ ಕಟ್ ಹೇಳಲು ‘ನೋ’ ಅಂದಿದ್ದೇಕೆ ರಾಜಮೌಳಿ..?

1 min read

ಬಾಲಿವುಡ್ ನ ‘ಬ್ಯಾಡ್ ಬಾಯ್’ ಗೆ ಆಕ್ಷನ್ ಕಟ್ ಹೇಳಲು ‘ನೋ’ ಅಂದಿದ್ದೇಕೆ ರಾಜಮೌಳಿ..?

ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಜೊತೆ ಸಿನಿಮಾ ಮಾಡುವುದಕ್ಕೆ ಬಾಲಿವುಡ್ ಸೇರಿ ದೊಡ್ಡ ದೊಡ್ಡ ಸ್ಟಾರ್ ಕಲಾವಿದರೇ ತುದಿಗಾಲಲ್ಲಿ ಕಾಯುತ್ತಿದ್ದಾರೆ.. ಅದ್ರಲ್ಲೂ ಬಾಹುಬಲಿ ನಂತರವಂತೂ ರಾಜ್ ಮೌಳಿ ಬ್ರ್ಯಾಂಡ್ ವ್ಯಾಲ್ಯೂ ಗಗನಕ್ಕೇರಿದೆ..  ಸದ್ಯ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದ RRR ನಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ.. ಸಿನಿಮಾದಲ್ಲಿ ರಾಮ್ ಚರಣ್ , ಜ್ಯೂನಿಯರ್ NTR ನಾಯಕರಾಗಿದ್ದು, ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.. ಈ ನಡುವೆ ರಾಜಮೌಳಿ ಹಾಗೂ ಸಲ್ಮಾನ್ ಖಾನ್ ಬಗೆಗಿನ ಒಂದು ಇಂಟರೆಸ್ಟಿಂಗ್ ವಿಚಾರವನ್ನ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬಹಿರಂಗ ಪಡಿಸಿದ್ದಾರೆ.

“ಅಕ್ಕ ಬೆಳಗ್ಗೆ ಯೋಗ ಕಲಿಸ್ತಾರೆ, ಭಾವ ರಾತ್ರಿ ಯೋಗ ಕಲಿಸ್ತಿದ್ದಾರೆ “: ಟ್ರೋಲ್ ಗೆ ಗುರಿಯಾದ ಶಿಲ್ಪಾ ತಂಗಿ ಶಮಿತಾ..!

ಹೌದು.. ಒಮ್ಮೆ ರಾಜಮೌಳಿಗೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಗೆ ಆಕ್ಷನ್ ಕಟ್ ಹೇಳುವ ಅವಕಾಶ ಬಂದಿತ್ತು. ಆದರೆ ರಾಜಮೌಳಿ ಆ ಅವಕಾಶವನ್ನು ತಿರಸ್ಕರಿಸಿದ್ದರು ಎಂದು ವಿಜಯೇಂದ್ರ ಪ್ರಸಾದ್ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದಾರೆ.. ಅಷ್ಟಕ್ಕೂ ಬಾಲಿವುಡ್ ಕಿಂಗ್ ಖಾನ್ ಗೆ ಆಕ್ಷನ್ ಕಟ್ ಹೇಳಲು ರಾಜಮೌಳಿ ನಿರಾಕರಿಸಿದ್ದೇಕೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ..  2015ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯ್ ಜಾನ್ ಗೆ  ರಾಜಮೌಳಿ ನಿರ್ದೇಶಕರಾಗಬೇಕಿತ್ತು.. ಆದ್ರೆ ಆ ಅವಕಾಶವನ್ನ ರಾಜಮೌಳಿ ತಿರಸ್ಕರಿಸಿದ್ದರು ಎನ್ನಲಾಗ್ತಿದೆ.. ಅಂದ್ಹಾಗೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.. ಸಿನಿಮಾದ ಯಶಸ್ಸಿನ ಹಿಂದೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಇದ್ದರು. ಈ ಸಿನಿಮಾದ ಕಥೆ ಬರೆದಿದ್ದು ವಿಜಯೇಂದ್ರ ಪ್ರಸಾದ್ ಅವರೇ ಆಗಿದ್ದರು. ಕಬೀರ್ ಖಾನ್ ನಿರ್ದೇಶಿಸಿದ್ದರು..

ಆದರೆ ವಿಜಯೇಂದ್ರ ಪ್ರಸಾದ್  ಅವರು ಕಥೆ ಬರೆದಿದ್ದ ಈ ಸಿನಿಮಾಗೆ ರಾಜಮೌಳಿ ನಿರ್ದೇಶನ ಮಾಡಬೇಕು ಎನ್ನುವ  ಆಸೆಯನ್ನ ಹೊಂದಿದ್ದರು ಎನ್ನಲಾಗಿದೆ. ಆದರೆ ಅದೇ ಸಮಯದಲ್ಲಿ ರಾಜಮೌಳಿ ಬಾಹುಬಲಿ ಚಿತ್ರದ ಚಿತ್ರೀಕರಣದಲ್ಲಿದ್ದರು. ಆಗ ವಿಜಯೇಂದ್ರ ಪ್ರಸಾದ್ ಭಜರಂಗಿ ಭಾಯ್ ಜಾನ್ ಕಥೆಯನ್ನು ರಾಜಮೌಳಿ ಬಳಿ ವಿವರಿಸಿದ್ದರು. ಆದರೆ ಈ ಸಿನಿಮಾ ಮಾಡಲು ರಾಜಮೌಳಿ ಹಿಂದೇಟು ಹಾಕಿದ್ದರು ಎಂದು ವಿಜಯೇಂದ್ರ ಪ್ರಸಾದ್ ಅವರೇ ಬಹಿರಂಗ ಪಡಿಸಿದ್ದಾರೆ.

ಪ್ರಿಯಾಂಕಗೆ ಅಶ್ಲೀಲ ಸನ್ನೆ ತೋರಿಸಿದ್ದ ಚಕ್ರವರ್ತಿ ವಿರುದ್ಧ ಕೆಂಡಾಮಂಡಲರಾದ ಕಿಚ್ಚ ಸುದೀಪ್..!  

BIGGBOSS 8 : ಗ್ರ್ಯಾಂಡ್ ಫಿನಾಲೆ  ಯಾವಾಗ ಗೊತ್ತಾ..? ಡೇಟ್ ರಿವೀಲ್ ಮಾಡಿದ  ಕಿಚ್ಚ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd