Rajanikanth
ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರೆಗೆ ವಿಧಿಸಿದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಸಿಡಿದೆದ್ದಿದ್ದಾರೆ.
ಅಲ್ಲದೇ ಮದ್ರಾಸ್ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ ತಲೈವಾ.
ಅಂದ್ಹಾಗೆ ತಮಿಳು ನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪವಿದೆ.
ಚೆನ್ನೈ ಕಾರ್ಪೋರೇಷನ್ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಅರ್ಧ ವರ್ಷ ಅವಧಿಗೆ ತೆರಿಗೆ ನೋಟಿಸ್ ನೀಡಿದೆ.
ಆದರೆ ಲಾಕ್ ಡೌನ್ ಸಮಯದಲ್ಲಿ ಯಾವುದೇ ಆದಯವಿಲ್ಲದೆ ಹೇಗೆ ಇಷ್ಟು ಮೊತ್ತದ ತೆರಿಗೆ ಪಾವತಿಸುವುದು ಎಂದು ರಜನಿ ಹೈ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಇನ್ನೂ ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇನೆ. ಕೊನೆಯದಾಗಿ ಫೆಬ್ರವರಿ 14ರಂದು ತೆರೆಗೆ ಪಾವತಿಸಲಾಗಿದೆ.
ಲಾಕ್ ಡೌನ್ ಗೂ ಮೊದಲು ಹಾಲ್ ಬುಕ್ ಮಾಡಿದ್ದ ಜನರಿಗೆ ಸರ್ಕಾರದ ಆದೇಶದಂತೆ ಹಣ ಮರುಪಾವತಿಸಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಸೂಪರ್ ಸ್ಟಾರ್ ತಮ್ಮ ವಕೀಲ ವಿಜಯನ್ ಸುಬ್ರಮಣಿಯನ್ ಮೂಲಕ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
‘AMMA’ಗೆ ಗುಡ್ ಬೈ ಹೇಳಿದ ‘ಮಿಲನ’ ಪಾರ್ವತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel