3 ವರ್ಷದ ಮಗುವನ್ನಕೊಂದು ಚಲಿಸುವ ರೈಲಿನಿಂದ ಎಸೆದ ಸ್ವಂತ ತಾಯಿ…
ಹೆತ್ತ ತಾಯಿಯೇ ಮೂರು ವರ್ಷದ ಮಗುವನ್ನ ಕೊಂದು ಚಲಿಸುವ ರೈಲಿನಿಂದ ಕೆಳಗೆಸೆದಿರುವ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಆಘಾತಕಾರಿ ಘಟನೆಯಲ್ಲಿ ಬಂಧಿಸಲಾಗಿದೆ.
ಆರೋಪಿಗಳನ್ನ ಸುನೀತಾ ಮತ್ತು ಸನ್ನಿ ಅಲಿಯಾಸ್ ಮಾಲ್ಟಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಐದು ಮಕ್ಕಳನ್ನ ಹೊಂದಿರುವ ಸುನೀತಾ ಗಂಡನಿಂದ ದೂರಾಗಿ ಪ್ರಿಯಕರನ ಜೊತೆ ವಾಸಿಸಿತ್ತಿದ್ದಳು. ಮೂರು ಮಕ್ಕಳು ಗಂಡನ ಜೊತೆ ಎರಡು ಹೆಣ್ಣು ಮಕ್ಕಳು ಸುನೀತಾ ಜೊತೆ ವಾಸಿಸುತ್ತಿದ್ದವು.
ಮಂಗಳವಾರ ರಾತ್ರಿ ಮಹಿಳೆ ಮಗಳು ಕಿರಣ್ ನನ್ನ ಕತ್ತು ಹಿಸುಕಿ ಕೊಂದು ಪ್ರಿಯಕರನ ಸಹಾದಿಂದ ಬೆಡ್ ಶೀಟ್ ನಲ್ಲಿ ದೇಹವನ್ನ ಸುತ್ತಿದ್ದಾರೆ. ನಂತರ ಶ್ರೀಗಂಗಾನಗರ್ ರೈಲು ನಿಲ್ದಾಣಕ್ಕೆ ತೆರಳಿ ರೈಲು ಹತ್ತಿದ್ದಾರೆ. ರೈಲು ಕಾಲುವೆ ಮೇಲಿರುವ ಸೇತುವೆ ತಲುಪಿದಾಗ ಕಾಲುವೆಗೆ ಎಸೆಯುವ ಪ್ರಯತ್ನದಲ್ಲಿ ಮಗುವಿನ ಶವ ಹಳಿಗಳ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಗುರುತು ಪತ್ತೆ ಹಚ್ಚಿದ ಪೊಲೀಸರು ತಾಯಿಯನ್ನ ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ ಮಗಳನ್ನ ಕೊಂದಿರುವುದನ್ನ ಒಪ್ಪೊಕೊಂಡಿದ್ದಾಳೆ.
Rajasthan: A 3-year-old child was thrown from a moving train by her own mother…