30 ಕೆಜಿಯ ಕಬ್ಬಿಣದ ಚೈನ್ ನಲ್ಲಿ 3 ತಿಂಗಳ ಕಾಲ ಪತ್ನಿಯನ್ನ ಕಟ್ಟಿಟ್ಟ ಪಾಪಿ ಪತಿ
ರಾಜಸ್ಥಾನ : ಪತ್ನಿಯೊಬ್ಬಳನ್ನ ಆಕೆಯ ಪತಿ 30 ಕೆಜಿ ತೂಕದ ಕಬ್ಬಿಣದ ಚೈನ್ ನಲ್ಲಿ ಕಟ್ಟಿಟ್ಟು ಚಿತ್ರಹಿಂಸೆ ಕೊಟ್ಟಿರುವ ಅಮಾನವೀಯ ಘಟನೆ ರಾಜಸ್ಥಾನದ ಪ್ರತಾಪ್ ಗಢದಲ್ಲಿ ನಡೆದಿದೆ.. ಜೀವಾ ಬಾಯ್ ಎಂಬ ಮಹಿಳೆಗೆ ಮದುವೆಯಾಗಿ ಒಬ್ಬ ಮಗ ಇದ್ದಾನೆ. ಆಕೆಯ ತಾಯಿ ಮನೆಯಲ್ಲಿ ಒಬ್ಬಂಟಿಯಾಗಿದ್ದು, ಆಕೆಯ ಸಹಾಯಕ್ಕೆಂದು ಜೀವಾ ಆಗಾಗ ತಾಯಿ ಮನೆಗೆ ಹೋಗಿ ಬರುತ್ತಿದ್ದಳೆ. ಆದರೆ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಆಕೆಯ ಪತಿ ಹೊಡೆದು ಬಡೆದು ಚಿತ್ರಹಿಂಸೆ ನೀಡುತ್ತಿದ್ದನಂತೆ..
ಅಕ್ರಮ ಸಂಬಂಧವಿಟ್ಟುಕೊಂಡಿರುವುದಾಗಿ ಅನುಮಾನಿಸಿ ಪ್ರತಿನಿತ್ಯ ಹಿಂಸಿಸುತ್ತಿದ್ದ.. ಆದ್ರೆ ಇದನ್ನೂ ಮೀರಿ ಕ್ರೂರಿಯಂತೆ ವರ್ತಿಸಿರುವ ಪಾಪಿ 30 ಕೆಜಿಯ ಕಬ್ಬಿಣದ ಚೈನ್ ಅನ್ನು ತಂದು ಅದರಲ್ಲಿ ಹೆಂಡತಿಯ ಕೈ ಕಾಲುಗಳಿಗೆ ಕಟ್ಟಿ ಬಿಟ್ಟಿದ್ದಾನೆ. ಸುಮಾರು ಮೂರು ತಿಂಗಳ ಕಾಲ ಆಕೆ ಆ ಚೈನ್ನೊಂದಿಗೇ ಜೀವನ ಸಾಗಿಸಿದ್ದಾಳೆ. ಈ ವಿಚಾರ ಸ್ಥಳೀಯರ ಮೂಲಕ ಪೊಲೀಸರಿಗೆ ತಿಳಿದಿದೆ.. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನ ಚೈನ್ ನಿಂದ ಬಿಡುಗಡೆಗೊಳಿಸಿದ್ದಾರೆ. ಪತಿ ಪಲಾಯನ ಮಾಡಿದ್ದು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.