Rajasthan : ರಾಮನವಮಿ ವೇಳೆ ವಿದ್ಯುತ್ ಸ್ಪರ್ಶಿಸಿ ಮೂರು ಮಂದಿ ಸಾವು….
ಗುರುವಾರ ರಾಮನವಮಿ ಆಚರಣೆಯ ವೇಳೆ ವಿದ್ಯುತ್ ಸ್ಪರ್ಶದಿಂದಾಗಿ ಮೂವರು ಯುವಕರು ಸಾವನ್ನಪ್ಪಿದರೇ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
ಮಾನವ ಪಿರಾಮಿಡ್ ರಚಿಸಿ ಸಾಹಸ ಪ್ರದರ್ಶಿಸುವಾಗ ಓವರ್‌ಹೆಡ್ ಹೈ ಟೆನ್ಷನ್ ಕೇಬಲ್‌ಗೆ ಸಿಲುಕಿ ವಿದ್ಯುತ್ ಸ್ಪರ್ಶಿಸಿ ಅವಘಡ ಜರುಗಿದೆ ಎಂದು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ ಗಜೇಂದ್ರ ಸಿಂಗ್ ತಿಳಿಸಿದ್ದಾರೆ. ಕೋಟಾ ಜಿಲ್ಲೆಯ ಕೊಟ್ರಡೀಟ್ ಗ್ರಾಮದಲ್ಲಿ ಸಂಜೆ 5:45 ರ ಸುಮಾರಿಗೆ ಈ ದುರಂತ ಘಟನೆ ನಡೆದಿದೆ.
ಎಲ್ಲಾ ಆರು ಜನರನ್ನು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಸಾಗಿಸಲಾಯಿತು, ಅಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತರನ್ನ ಬರೋಡಾ ಗ್ರಾಮದ ನಿವಾಸಿಗಳಾದ ಅಭಿಷೇಕ್, 24, ಮಹೇಂದ್ರ ಯಾದವ್, 40, ಮತ್ತು 25 ವರ್ಷದ ಲಲಿತ್ ಪ್ರಜಾಪತ್ ಎಂದು ಗುರುತಿಸಲಾಗಿದೆ. ವಿದ್ಯುತ್ ಲೈನ್ ರಬ್ಬರ್ ನಿಂದ ಲೇಪಿತವಾಗಿತ್ತು. ಆದರೆ ಹೇಗೋ ಇವರ ಸಂಪರ್ಕಕ್ಕೆ ಬಂದು ವಿದ್ಯುತ್ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Rajasthan: Three people died due to electrocution during Ramnavami.