ಜೀವನ ಹಾಳು ಮಾಡಿಕೊಳ್ಳುವುದ ಬೇಡ ಎಂದು ಭಗವಾನ್ ವಿಷ್ಣುವನ್ನ ಮದುವೆಯಾದ ಮಹಿಳೆ…
ಕೃಷ್ಣ ಭಕ್ತೆ ಮೀರಾಬಾಯಿ ನಾಡು ರಾಜಸ್ಥಾನಕ್ಕೆ ಆಧುನಿಕ ಮಿರಾ ಬಾಯಿ ಸಿಕ್ಕಿದ್ದಾಳೆ. ಸಂಸಾರದ ಜಂಜಾಟವೇ ಬೇಡ ಎಂದು ನಿರ್ಧರಿಸಿದ ಯುವತಿ ಭಗವಾನ್ ವಿಷ್ಣುವನ್ನೇ ಮದುವೆಯಾಗಿದ್ದಾಳೆ. ಪೊಲಿಟಿಕಲ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪಧವೀಧರರಾಗಿರುವ ಪೂಜಾ ಸಿಂಗ್ ಅವರು ತಮ್ಮ ಠಾಕೂರ್ ಜಿ ಯನ್ನೇ ವರಿಸಿದ್ದಾಳೆ.
ದೇವರನ್ನ ಮದುವೆಯಾಗಲು ಪೂಜಾ ಸಿಂಗ್ ನೀಡಿದ ಕಾರಣಗಳೂ ಭಿನ್ನನವಾಗಿಯೇ ಇವೇ. ಮದುವೆಯಾದ ನಂತರ ವೈವಾಹಿಕ ಕಾರಣಗಳಿಂದಾಗಿ ಜೀವನವನ್ನ ನಾನು ಹಾಳು ಮಾಡಿಕೊಳ್ಳಲ್ಲ ಎಂದು ಪೂಜಾ ಸಿಂಗ್ ಹೇಳಿದ್ದಾರೆ. “ ನಾನು ಕ್ಷುಲ್ಲಕ ಕಾರಣಗಳಿಗಾಗಿ ಪತಿ – ಪತ್ನಿಯರ ನಡುವೆ ಜಗಳಗಳನ್ನ ನಡೆಯುದನ್ನ ನೋಡಿದ್ದೇನೆ. ಜೀವನವೇ ಹಾಳಾಗುತ್ತದೆ. ಇದರಲ್ಲಿ ಹೆಚ್ಚು ಬಳಲುತ್ತಿರುವವರು ಮಹಿಳೆಯರು. ಆದ್ದರಿಂದ ನಾನು ಭಗವಾನ್ ವಿಷ್ಣು ಠಾಕೂರ್ ಜಿ ಅವರನ್ನ ಮದುವೆಯಾಗಲು ನಿರ್ಧರಿಸಿದೆ ಎಂದು ಪೂಜಾ ಹೇಳಿದ್ದಾರೆ.
ಜೈಪುರದ ನರಸಿಂಗಪುರ ಗ್ರಾಮದ ನಿವಾಸಿ ಪೂಜಾ ಸಿಂಗ್ 30 ವರ್ಷ ವಯಸ್ಸಿನವರಾಗಿದ್ದು, ಡಿಸೆಂಬರ್ 8 ರಂದು ಭಗವಾನ್ ಠಾಕುರ್ ಜಿ ಅವರನ್ನ ವಿವಾಹವಾಗಿದ್ದಾರೆ. ಬಿಎಸ್ಎಫ್ನಿಂದ ನಿವೃತ್ತರಾಗಿರುವ ಆಕೆಯ ತಂದೆ ಈ ಮದುವೆಯಿಂದ ಬೇಸರಗೊಂಡಿದ್ದು, ಮದುವೆ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ, ಆದರೆ ತಾಯಿ ರತನ್ ಕನ್ವರ್ ಇದಕ್ಕೆ ಬೆಂಬಲ ನೀಡಿ ಕನ್ಯಾದಾನ ಮಾಡಿದರು.
ಔಪಚಾರಿಕ ವಿವಾಹ ಸಮಾರಂಭದಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬ ಸದಸ್ಯರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಪೂಜಾ ಸಿಂಗ್ ಅವರು ಭಗವಾನ್ ವಿಷ್ಣುವಿನ ಪ್ರತಿಮೆಯೊಂದಿಗೆ ಮದುವೆಯಾಗಿದ್ದಾರೆ.
ಈ ರೀತಿಯ ಮದುವೆಯ ಬಗ್ಗೆ ಮನೆಯವರಿಗೆ ಮನವರಿಕೆ ಮಾಡುವುದು ಸುಲಭವಲ್ಲ ಆದರೆ ತಾನು ನಿರ್ಧರಿಸಿ ಅಂತಿಮವಾಗಿ ತನ್ನ ತಾಯಿಯ ಬೆಂಬಲವನ್ನು ಪಡೆದಿದ್ದೇನೆ ಎಂದು ಪೂಜಾ ಹೇಳಿದರು.
ಪೂಜಾ ತುಳಸಿ ವಿವಾಹದ ಬಗ್ಗೆ ಕೇಳಿದ ನಂತರ ಪಂಡಿತರೊಂದಿಗೆ ಚರ್ಚಿಸಿ ಹಿಂದೂ ಸಂಪ್ರದಾಯದ ಪ್ರಕಾರ ಇದು ಸಾಧ್ಯ ಎಂದ ಮೇಲೆ ಮದುವೆಯಾಗಿದ್ದಾರೆ.
Rajasthan woman marries Lord Vishnu as she doesn’t want ruined life after marriage