Thalaivar 169 | ಜೈಲರ್ ಆಗಿ ಸೂಪರ್ ಸ್ಟಾರ್ ರಜನಿಕಾಂತ್..

1 min read
rajinikanth-169th-movie saaksha tv

rajinikanth-169th-movie saaksha tv

Thalaivar 169 | ಜೈಲರ್ ಆಗಿ ಸೂಪರ್ ಸ್ಟಾರ್ ರಜನಿಕಾಂತ್..

ತಲೈವಾ ರಜಿನಿ ಕಾಂತ್ 169ನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ.

ಅಣ್ಣಾಥೈ ಸಿನಿಮಾ ಬಳಿಕ ಅವರು ನಟಿಸುತ್ತಿರುವ ಸಿನಿಮಾ ಜೈಲರ್.

ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ.

ರಜಿನಿಕಾಂತ್ ಸಿನಿಮಾ ಅಂದ್ರೆ ಅಲ್ಲಿ ಭಾರಿ ತಾರಾಗಣ, ಆಧುನಿಕ ತಂತ್ರಜ್ಞರು ಇರುತ್ತಾರೆ.

ಅದರಂತೆ ಈ ಸಿನಿಮಾದಲ್ಲಿ ಬಿಸ್ಟ್ ಸಿನಿಮಾದ ನೆಲ್ಸನ್ ನಿರ್ದೇಶನ ಮಾಡಲಿದ್ದಾರಂತೆ.

rajinikanth-169th-movie saaksha tv
rajinikanth-169th-movie saaksha tv

ಈ ಸಿನಿಮಾದಲ್ಲಿ ರಜಿನಿ ಕಾಂತ್ ಗೆ ಜೋಡಿಯಾಗಿ ರೋಬೋ ಸಿನಿಮಾದ ಬಳಿಕ ಐಶ್ವರ್ಯ ರೈ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಟಿ ಪ್ರಿಯಾಂಕ ಮೋಹನ್ ಮತ್ತೊಬ್ಬ ನಟಿ ಕಾಣಿಸಿಕೊಳ್ಳಲಿದ್ದಾರೆ. ರಮ್ಯಕೃಷ್ಣ, ಕೆ.ಎಸ್.ರವಿಕುಮಾರ್,  ಹೀರೋ ಶಿವಕಾರ್ತಿಕೇಯನ್ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾಗೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಅಲ್ಲದೇ ಸನ್ ಪಿಚ್ಚರ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

ಜೈಲಿನಲ್ಲಿ ಖೈದಿಗಳ ನೈಪಥ್ಯದಲ್ಲಿ ಸಿನಿಮಾ ಇರಲಿದೆ. ಜುಲೈನಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.    

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd