ಸ್ಟಾರ್ ಜೋಡಿ ಲಿಸ್ಟ್ ನಲ್ಲಿ ಶಾಮೀಲಾದ ರಾಜ್ ಕುಮಾರ್ – ಪತ್ರಲೇಖಾ

1 min read

ಸ್ಟಾರ್ ಜೋಡಿ ಲಿಸ್ಟ್ ನಲ್ಲಿ ಶಾಮೀಲಾದ ರಾಜ್ ಕುಮಾರ್ – ಪತ್ರಲೇಖಾ

ಮದುವೆ ಸಂಭ್ರದಲ್ಲಿ ರಾಜ್ ಕುಮಾರ್ – ಪತ್ರಲೇಖಾ..!

ಬಾಲಿವುಡ್ ನ ಸ್ಟಾರ್ ಕಪಲ್ ಪಟ್ಟಿಗೆ ಸೇರಿದ ಜೋಟಿ

ಸ್ತ್ರೀ , ರೂಹಿ ಹಾರರ್ ಸಿನಿಮಾದಿಂದ ಹೆಚ್ಚು ಖ್ಯಾತಿ ಪಡೆದ ರಾಜ್ ಕುಮಾರ್

 

ರಾಜ್‌ಕುಮಾರ್ ರಾವ್ ಮತ್ತು ಬಹುಕಾಲದ ಗೆಳತಿ ಪತ್ರಲೇಖಾ  ಅವರು ಶನಿವಾರ ರಾತ್ರಿ ಚಂಡೀಗಢದಲ್ಲಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡರು.. ಅವರ ಈ ಮುದ್ದಾದ ಕ್ಷಣದ ವಿಡಿಯೋ ಸಖತ್ ವೈರಲ್ ಆಗ್ತಿದೆ. ಈ ಜೋಡಿ ಇಂದು ಸಂಜೆ ವಿವಾಹವಾಗಲಿದೆ..  ಇಬ್ಬರೂ ಕೂಡ ನಿಶ್ಚತಾರ್ಥದಲ್ಲಿ ಸಮಯದಲ್ಲಿ ಸರಳವಾಗಿ ಬಿಳಿ ಬಣ್ಣದ ಉಡುಪಿನಲ್ಲಿ ಮುದ್ದಾಗಿ ಕಾಣಿಸಿಕೊಂಡರು..

ಈ ವೇಳೆ ರಾಜ್ ಕುಮಾರ್ ಅವರು ಪತ್ರಲೇಖಾ ಅವರಿಗೆ ಮೊಣಕಾಲಿನ ಸಹಾಯದಲ್ಲಿ ಮಂಡಿಯೂರಿ ಕೂತು ಪ್ರಪೋಸ್ ಮಾಡಿದ್ರೆ , ಪತ್ರಲೇಖಾ ಕೂಡ ಕೆಳಗೆ ಕೂತು ರಾಜ್ ಕುಮಾರ್ ರಾವ್ ಅವರಿಗೆ ಉಂಗುರು ಧರಿಸಿದ್ದನ್ನ ಕಂಡು ಅತಿಥಿಗಳು ಸಂತೋಷ ಪಟ್ರೆ , ನೆಟ್ಟಿಗರು ಕೂಡ ಈ ಜೋಡಿಗೆ ಫಿದಾ ಆಗಿದ್ದಾರೆ. ಈ ಜೋಡಿ 6 ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದೆ.. ಅವರು ಸಿಟಿಲೈಟ್ಸ್‌ ನಲ್ಲಿ ಸಹ-ನಟರಾಗಿದ್ದರು. ರಾಜ್ ಕುಮಾರ್ ಅವರು ಹಿಟ್ ಹಾರರ್ ಸಿನಿಮಾಗಳಾದ ಸ್ತ್ರೀ , ರೂಹಿ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ರು..  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd