ಮಾಸ್ಕೋ: ರಷ್ಯಾದ ೭೫ನೇ ವರ್ಷದ ವಿಕ್ಟರಿ ಪರೇಡ್‌ನಲ್ಲಿ ಪಾಲ್ಗೊಳ್ಳಲು ತೆರಳಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್, ಮಹಾತ್ಮಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ.
ಮೂರು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ರಾಜನಾಥ್‌ಸಿಂಗ್, ಮಾಸ್ಕೋ ತಲುಪುತ್ತಿದ್ದಂತೆ ಮೊದಲು ಮಾಡಿದ್ದೇ ಭಾರತೀಯ ರಾಯಭಾರಿ ಕಚೇರಿ ಎದುರಿನ ಗಾಂಧಿ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಗೌರವ ಸೂಚಿಸಿದರು.
ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಸೋವಿಯತ್ ರಷ್ಯಾ ಜರ್ಮನಿ ವಿರುದ್ಧ ಸಾಧಿಸಿದ ಗೆಲುವಿನ ವಿಜಯೋತ್ಸವದ ಅಂಗವಾಗಿ ೭೫ನೇ ವಿಕ್ಟರಿ ಪರೇಡ್ ಆಯೋಸಲಾಗಿದೆ. ಭಾರತದ ಮೂರು ಸೇನಾಪಡೆಗಳ ೭೫ ಸದಸ್ಯರ ತಂಡ ೧೧ ರಾಷ್ಟ್ರಗಳ ತಂಡಗಳೊAದಿಗೆ ರಷ್ಯಾದ ವಿಜಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲಿದೆ.