ಬಿಗ್ ಬಾಸ್ ಸೀಜನ್ 5 ತಮಿಳು – ಟ್ರೋಫಿ ಗೆದ್ದ ರಾಜು ಜಯಮೋಹನ್
ಅನೇಕಾ ಭಾಷೆಗಳಲಲ್ಲಿ ಏರ್ಪಾಡಾಗಿ ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕಾರ್ಯಕ್ರಮ ಬಿಗ್ ಬಾಸ್. ಹಿಂದಿ ಕನ್ನಡ ತೆಲುಗು ಬಳಿಕ ತಮಿಳಿನಲ್ಲೂ ಕಾರ್ಯಕ್ರಮ ಉತ್ತಮವಾಗಿ ಸಾಗುತ್ತಿದೆ. ತಮಿಳಿನಲ್ಲಿ ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ.
ಇದೀಗ ತಮಿಳಿನಲ್ಲಿ ಬಿಗ್ ಬಾಸ್ 5ನೇ ಸೀಜನ್ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು. ಈ ಭಾರಿಯ ವಿನ್ನರ್ ಆಗಿ ರಾಜು ಜಯಮೋಹನ್ ಹೊರಹೊಮ್ಮಿದ್ದಾರೆ. ಜನವರಿ 16 ರಾತ್ರಿ ನಡೆದ ಅದ್ದೂರಿ ಗ್ರಾಂಡ್ ಫಿನಾಲೆಯಲ್ಲಿ ಐವರು ಪೈನಲಿಸ್ಟ್ ಗಳನ್ನ ಹಿಂದಿಕ್ಕಿ ಅತಿಹೆಚ್ಚು ಒಟ್ ಪಡೆಯುವ ಮೂಲಕ ರಾಜು ಜಯಮೋಹನ್ ಬಿಗ್ ಬಾಸ್ ಸೀಜನ್ 5 ನ ಟೈಟಲ್ ಗೆದ್ದಿದ್ದಾರೆ.
ರಾಜು ಜಯಮೋಹನ್ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಮೂಲಕ 50 ಲಕ್ಷ ರುಪಾಯಿಗಳ ಬಹುಮಾನ ಗೆದ್ದಿದ್ದಾರೆ. ಸ್ಟಾಂಡಪ್ ಕಾಮಿಡಿಯನ್ ಆಗಿರುವ ರಾಜು ತಮ್ಮ ಮಿಮಿಕ್ರಿ ಮತ್ತು ಪಂಚಿಂಗ್ ಡೈಲಾಗ್ ಗಳಿಂದ ಎಲ್ಲರ ಮನ ಗೆದ್ದಿದ್ದರು. ಐದು ಭಾರಿ ನಾಮಿನೇಟ್ ಆಗಿದ್ದರು ಜನರ್ ಒಟ್ ‘ಮೂಲಕ ಸೇಫ್ ಆಗಿ ಫೈನಲ್ ತಲುಪಿದ್ದರು.
ರಾಜು ಜಯಮೋಹನ್ ಗೆ ಪ್ರತಿಸ್ಪರ್ಧಿಯಾಗಿ ಪ್ರಿಯಾಂಕ್ ದೇಶಪಾಂಡೆ ಪಾವನಿ ರೆಡ್ಡಿ ನಿರೂಪ್ ನಂದಕುಮಾರ್ ಹಾಗು ಅಮೀರ್ ಅವರು ಅಂತಿಮ ಘಟ್ಟ ತಲುಪಿದ್ದರು. ಫಿನಾಲೆ ವಿನ್ನರ್ ನ ಘೋಷಿಸುವ ಮುನ್ನ ವೇದಿಕೆ ಮೇಲೆ ರಂಗು ರಂಗಿನ ಕಾರ್ಯಕ್ರಮಗಳು ನಡೆದ್ದವು.
ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯಲ್ಲಿ ವಿಶೇಷ ಅತಿಥಿಯಾಗಿ ನಟ ಶಿವಕಾರ್ತಿಕೇಯನ್ ಭಾಗವಹಿಸಿದ್ದರು.







