ನವದೆಹಲಿ : ದೇಶದ 19 ರಾಜ್ಯಗಳಲ್ಲಿ ಇಂದು ರಾಜ್ಯಸಭಾ ಚುನಾವಣೆ ನಡೆಯುತ್ತಿದೆ. ಅಂದ್ರಪ್ರದೇಶ್ ಮತ್ತು ಗುಜರಾತ್ ನಲ್ಲಿ ತಲಾ 4 ಸ್ಥಾನಗಳು, ಮಧ್ಯಪ್ರದೇಶದ ಮತ್ತು ರಾಜಸ್ಥಾನ ತಲಾ ಮೂರು ಸ್ಥಾನಗಳು, ಜಾರ್ಖಂಡ್, ಮಿರೋರಾಂ, ಮಣಿಪುರ, ಮೇಘಾಲಯದಲ್ಲಿ ತಲಾ ಒಂದೊಂದು ಸ್ಥಾನಗಳಿಗೆ ಎಲೆಕ್ಷನ್ ಫೈಟ್ ನಡೆಯುತ್ತಿದೆ.
19 ರಾಜ್ಯಗಳ ವಿಧಾನ ಸಭೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಸಂಜೆ 5 ಗಂಟೆಗೆ ಮತ ಎಣಿಕೆಯಾಗಯುತ್ತದೆ. ಬಳಿಕ ಫಲಿತಾಂಶ ಹೊರ ಬೀಳಲಿದೆ. ಈ ಬಾರಿ ಒಟ್ಟು 55 ರಾಜ್ಯಸಭಾ ಸ್ಥಾನಗಳು ಖಾಲಿಯಾಗಿವೆ. ಅದರಲ್ಲಿ ಕರ್ನಾಟಕದ 4 ಸ್ಥಾನ ಸೇರಿದಂತೆ ಒಟ್ಟು 37 ಸ್ಥಾನಗಳಿಗೆ ಚುನಾವಣೆ ನಡೆಯುವುದಿಲ್ಲ. 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 18 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.
ಯಾವ ರಾಜ್ಯದಲ್ಲಿ ಹೇಗಿದೆ ಚುನಾವಣೆ ಪರಿಸ್ಥತಿ
ಕರ್ನಾಟಕ ರಾಜ್ಯದಲ್ಲಿ ಚುನಾವಣೆ ನಡೆಯದೆ 4 ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ 2 ಸ್ಥಾನ, ಕಾಂಗ್ರೆಸ್ 1 ಸ್ಥಾನ, ಜೆಡಿಎಸ್ 1 ಸ್ಥಾನ ಗಳನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಹೆಚ್ಚುವರಿ ಮತಗಳನ್ನು ಹೊಂದಿದ್ದರು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಒಂದು ವೇಳೆ ಕಣಕ್ಕಿಳಿಸಿದ್ದೆ ಚುನಾವಣೆ ನಡೆಯುತ್ತಿತ್ತು.
ಮದ್ಯ ಪ್ರದೇಶ್, ಗುಜರಾತ್ ರಾಜಸ್ಥಾನದ 10 ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಪೈಪೋಟಿ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಅಲ್ಲದೆ ರಾಜ್ಯಸಭೆ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವುದು ಎರಡು ಪಕ್ಷಗಳಿಗೆ ಅನಿವಾರ್ಯವಾಗಿದೆ.
ಜಾರ್ಖಂಡ್ ನಲ್ಲಿ ಎರಡು ಸ್ಥಾನಗಳಿಗೆ ಮೂವರು ಅಭ್ಯರ್ಥಿಗಳು ಕಣಕ್ಕಿಳಿದ್ದಾರೆ. ಜಾರ್ಖಂಡ್ ಆಡಳಿತಾರೂಢ ಜೆಎಂಎಂ ಮತ್ತು ಕಾಂಗ್ರೆಸ್-ಆರ್ ಜೆಡಿ ಮೈತ್ರಿಯಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಬ್ಬರಲ್ಲಿ ಶಿಬು ಸೋರೇನ್ ಜಯ ದಾಖಲಿಸುವುದು ಖಚಿತವಾಗಿದೆ. ಆದರೆ ಇನ್ನೊಂದು ಸ್ಥಾನ ಪಡೆಯಲು ಅದೃಷ್ಟ ಪರೀಕ್ಷೆ ಮಾಡಲು ಮೈತ್ರಿಕೂಟ ಮುಂದಾಗಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ್ ಪ್ರಕಾಶ್ ಜಯ ದಾಖಲಿಸು ತವಕದಲ್ಲಿದ್ದಾರೆ.
ಮೇಘಾಲಯದ ಒಂದು ಸ್ಥಾನಕ್ಕೆ ಎನ್,ಪಿ.ಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿಯಿದೆ. ಆದರೆ ಇಲ್ಲಿ ಕಾಂಗ್ರೆಸ್ ಗೆ ಸುಲಭದ ಜಯ ಸಿಗುವ ಸಾಧ್ಯತೆಯಿದೆ.
ಮಣಿಪುರದಲ್ಲಿ ಇರುವ ಒಂದು ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆರ ಹಣಾಹಣಿ ನಡೆಯುತ್ತಿದೆ. ಈ ನಡುವೆ ನಿನ್ನೆ ಬಿಜೆಪಿ ಸರ್ಕಾರಕ್ಕೆ ಮಿತ್ರ ಪಕ್ಷದ ಮತ್ತು ಸ್ವಪಕ್ಷಿಯರ ರಾಜಿನಾಮೆ ಬಹುದೊಡ್ಡ ಹೊಡೆತ ಬಿದ್ದಂತೆ ಆಗಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಯ ದಾಖಲಿಸುವ ಸಾಧ್ಯತೆಯಿದೆ.
ರಾಜಸ್ಥಾನದಲ್ಲಿ ಈಗಾಗಲೇ ಕುದುರೆ ವ್ಯಾಪಾರ ಜೋರಾಗಿ ನಡೆದಿದೆ. ಅಲ್ಲದೆ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಕಾರ್ಯದಲ್ಲಿ ಬಿಜೆಪಿ ಮಗ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ನಡುವೆ ರಾಜ್ಯಸಭೆ ಚುನಾವಣೆ ಎದುರಾಗಿದೆ. ಖಾಲಿರುವ 3 ಸ್ಥಾನಗಳಿಗೆ ಎರಡು ಸ್ಥಾನಗಳಿಗೆ ತಲಾ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ ಎರಡು ಪಕ್ಷಗಳು. ಜೊತೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವರಿ ಕೆ.ಸಿ ವೇಣುಗೋಪಾಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅಲ್ಲದೆ ರಾಜಸ್ಥಾನ ಕಾಂಗ್ರೆಸ್ ನಲ್ಲಿರುವ ಅಸಮಾಧಾನವನ್ನು ಫ್ಲಸ್ ಮಾಡಿಕೊಳ್ಳಳು ಬಿಜೆಪೆ ತಂತ್ರ ರೂಪಿಸಿದೆ.