ರಿಷಿ ಕಪೂರ್ ಈಡೇರಿಸದ ‌ ಆಸೆಯನ್ನು ಪೂರ್ಣಗೊಳಿಸಲಿರುವ ರಾಕೇಶ್ ರೋಶನ್

1 min read
Rakesh Roshan rishi kapoor

ರಿಷಿ ಕಪೂರ್ ಈಡೇರಿಸದ ‌ ಆಸೆಯನ್ನು ಪೂರ್ಣಗೊಳಿಸಲಿರುವ ರಾಕೇಶ್ ರೋಶನ್

ಕಳೆದ ವರ್ಷ ನಿಧನರಾದ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಅವರ ಆಪ್ತ ಸ್ನೇಹಿತರಲ್ಲಿ ರಾಕೇಶ್ ರೋಶನ್ ಕೂಡ ಒಬ್ಬರು. ಇಂದು, ಅವರಿಬ್ಬರ ಪುತ್ರರಾದ ಹೃತಿಕ್ ರೋಷನ್ ಮತ್ತು ರಣಬೀರ್ ಕಪೂರ್ ಕೂಡ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ರಣಬೀರ್ ಕಪೂರ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ನಟಿಸಿಲ್ಲ. ಆದರೆ ಈಗ ಈ ಎರಡೂ ಜೋಡಿಯನ್ನು ಒಟ್ಟಿಗೆ ಸೇರಿಸುವ ಸಿದ್ಧತೆಗಳು ಪ್ರಾರಂಭವಾದಂತೆ ಕಾಣುತ್ತಿದೆ.

ಮಾಹಿತಿಯ ಪ್ರಕಾರ, ರಣಬೀರ್ ಮತ್ತು ಹೃತಿಕ್ ಅವರು ಒಂದೇ ಚಿತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ರಾಕೇಶ್ ರೋಷನ್ ಏಪ್ರಿಲ್ 30 ರಂದು ಪತ್ನಿ ಪಿಂಕಿ ರೋಶನ್ ಅವರೊಂದಿಗೆ ರಿಷಿ ಕಪೂರ್ ಅವರ ಮನೆಗೆ ಹೋಗಿದ್ದರು. ರಾಕೇಶ್ ರೋಶನ್ ದಿವಂಗತ ನಟನಿಗೆ ಗೌರವ ಸಲ್ಲಿಸಿದರು. ಇದರೊಂದಿಗೆ, ಹೃತಿಕ್ ಮತ್ತು ರಣಬೀರ್ ಅವರನ್ನು ಒಟ್ಟಿಗೆ ನಟಿಸಲು ಯೋಜಿಸುತ್ತಿರುವುದಾಗಿ ರಾಕೇಶ್ ರೋಷನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
Rakesh Roshan rishi kapoor

ತಮ್ಮ ವಿಶೇಷ ಸಂದರ್ಶನದಲ್ಲಿ ರಾಕೇಶ್ ರೋಷನ್, ‘ನಾನು ಮತ್ತು ನನ್ನ ಪತ್ನಿ ಕಳೆದ ದಿನ ರಿಷಿ ಜಿ ಅವರ ಮನೆಗೆ ಹೋಗಿದ್ದೆವು. ಅಲ್ಲಿ ನಾವು ನೀತು, ರಿಧಿಮಾ ಮತ್ತು ರಣಬೀರ್ ಅವರನ್ನು ಭೇಟಿ ಮಾಡಿದ್ದೇವೆ’ ಎಂದು ಹೇಳಿದರು. ನಾವು ಸುಮಾರು 2 ರಿಂದ 3 ಗಂಟೆಗಳ ಕಾಲ ಇದ್ದೆವು. ರಿಷಿ ಬಗ್ಗೆ ಸಾಕಷ್ಟು ನೆನಪುಗಳು ಇವೆ. ನನ್ನ ಅನೇಕ ಕಥೆಗಳನ್ನು ನಾನು ರಣಬೀರ್‌ಗೆ ಹೇಳಿದ್ದೆ. ರಿಷಿ ಮತ್ತು ನಾನು ಚಿಕ್ಕವರಿದ್ದಾಗ ಒಟ್ಟಿಗೆ ಸಮಯವನ್ನು ಕಳೆಯುತ್ತಿದ್ದೆವು. ರಿಷಿ ಮತ್ತು ನಾನು ರಜೆಯ ಬಗ್ಗೆ ಮಾತನಾಡುತ್ತಿದ್ದೆವು ಮತ್ತು ಒಟ್ಟಿಗೆ ತುಂಬಾ ಆನಂದಿಸಿದೆವು. ನಂತರ ಬಾಲ್ಯದಲ್ಲಿ, ರಣಬೀರ್ ಮತ್ತು ಹೃತಿಕ್ ಕೂಡ ರಜಾದಿನಗಳಲ್ಲಿ ನಮ್ಮೊಂದಿಗೆ ಸೇರುತ್ತಿದ್ದರು. ಬಹಳ ಬೇಗನೆ ಇವರಿಬ್ಬರೂ ಒಟ್ಟಾಗಿ ಚಿತ್ರದಲ್ಲಿ ನಟಿಸುವುದನ್ನು ಕಾಣಬಹುದೆಂದು ನಾನು ಆಶಿಸುತ್ತೇನೆ ಎಂದು ಅವರು ‌ಹೇಳಿದರು.

ರಾಕೇಶ್ ರೋಷನ್ ತಮ್ಮ ಮಾತನ್ನು ಮುಂದುವರೆಸಿ, ನನ್ನ ಬಳಿ ಈಗ ಅಂತಹ ದೊಡ್ಡ ಕಥೆ ಇಲ್ಲ, ಆದರೆ ನಾನು ಇಬ್ಬರನ್ನೂ ಒಟ್ಟಿಗೆ ನಟಿಸುವಂತೆ ಮಾಡುತ್ತೇನೆ ಎಂದು ಹೇಳಬಹುದು. ಜೊತೆಗೆ, ನಾನು ನನ್ನ ಸ್ವಂತ ಚಿತ್ರ ‘ಕ್ರಿಶ್ 4’ ಅನ್ನು ಸಹ ತಡೆಹಿಡಿದಿದ್ದೇನೆ. ಈ ಕೋವಿಡ್ ನಮ್ಮ ಎಲ್ಲಾ ಯೋಜನೆಗಳಿಗೆ ನೀರು ಸುರಿದಂತಾಗಿದೆ. ಕೋವಿಡ್ -19 ಕೊನೆಗೊಂಡ ನಂತರ ನಾವು ಅದನ್ನು ಪ್ರಾರಂಭಿಸುತ್ತೇವೆ ಎಂದು ರಾಕೇಶ್ ಹೇಳಿದರು.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ

#RakeshRoshan #rishikapoor

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd