Rakhi Sawanth : ಆದಿಲ್ ವಿರುದ್ಧ ಕೇಸ್ , ಮೈಸೂರು ನ್ಯಾಯಾಲಯಕ್ಕೆ ರಾಖಿ ಹಾಜರಿ…!!
ಬಾಲಿವುಡ್ ನ ನೌಟಂಕಿ ಕ್ವೀನ್ ರಾಖಿ ಸಾವಂತ್ ಆಗಾಗ ಬಾಯ್ ಫ್ರೆಂಡ್ , ಮದ್ವೆ ವಿಚಾರಗಳಿಮದಲೇ ಸುದ್ದಿಯಾಗೋದು ಗೊತ್ತಿರೋ ವಿಚಾರವೇ..
ಕೆಲವೇ ದಿನಗಳ ಹಿಂದೆ ಮೈಸೂರಿನ ಹುಡುಗ ಆದಿಲ್ ಜೊತೆಗೆ ಮದುವೆಯಾಗಿದ್ದ ರಾಖಿ ಆ ಬಳಿಕವೇ ಆತನ ವಿರುದ್ಧ ವಂಚನೆ , ವರದಕ್ಷಿಣೆ ಕಿರುಕುಳ ಸೇರಿ ನಾನಾ ಆರೋಪಗಳನ್ನ ಹೊರಿಸಿ ಜೈಲಿಗಟ್ಟಿದ್ದು , ರಸ್ತೆಗಳಲ್ಲಿ ಕಣ್ಣೀರು ಸುರಿಸುತ್ತಾ ಇದ್ದಾರೆ..
ಅಲ್ಲದೇ ಪತಿ ಆದಿಲ್ ಗೆ ಬೇರೆ ಅವರ ಜೊತೆಗೆ ಸಂಬಂಧವಿದೆ.. ತನು ಎಂಬಾಕೆಗಾಗಿ ನನಗೆ ಮೋಸ ಮಾಡ್ತಿದ್ದಾನೆ.. ನನ್ನ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಮಾರಾಟ ಮಾಡಿದ್ದಾನೆ ಎಂದೆಲ್ಲಾ ಆರೋಪಗಳನ್ನ ಮಾಡಿದ್ದರು…
ಅಂದ್ಹಾಗೆ ಇದೇ ಕೇಸ್ ಸಂಬಂಧ ರಾಖಿ ಸಾವಂತ್ ಮೈಸೂರು ಕೋರ್ಟ್ ಗೆ ಹಾಜರಾದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು , ನನ್ನ ಪತಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು ಎಂಸಿದ್ದಾರೆ.
ಅಲ್ಲದೇ ನನ್ನನ್ನ ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲಾತಿ ನನ್ನ ಬಳಿ ಇದೆ.
ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ.
ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ. ನನಗೆ ಒಂದು ಪೈಸೆ ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದಾರೆ..
ಅಷ್ಟೇ ಅಲ್ಲ ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಆತ ಹೇಳಿದ್ದ ಎಂದಿದ್ದಾರೆ ರಾಖಿ..
ಅದಕ್ಕಾಗಿಯೇ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ.
ಮೈಸೂರು ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ..
Rakhi Sawanth , mysore court , Adil case