ಮೆಗಾ ಫ್ಯಾಮಿಲಿಯಾ ಮೆಗಾ ಚಿತ್ರ “ಆಚಾರ್ಯ” ಟ್ರೇಲರ್ ಔಟ್
ಬೀಸ್ಟ್ ಮತ್ತು ‘ಕೆಜಿಎಫ್ ಚಾಪ್ಟರ್ 2’ ನಂತರದ ಬಹು ನಿರೀಕ್ಷಿತ ಸೌತ್ ಚಿತ್ರ ಮೆಗಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ನಟನೆಯ ‘ಆಚಾರ್ಯ’ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
ಆಚಾರ್ಯ ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿ ರಿಲೀಸ್ ಆಗುವ ಮೊದಲು ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವಾರು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು. ಸಂಜೆ 5:49 ಕ್ಕೆ ಚಿತ್ರಮಂದಿರಗಳಲ್ಲಿ ಟ್ರೇಲರ್‌ನ ವಿಶೇಷ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಈ ವಿಶೇಷ ಸ್ಕ್ರೀನಿಂಗ್‌ನಿಂದಾಗಿ ಅಭಿಮಾನಿಗಳ ಸಂತೋಷ ಹಿಮ್ಮಡಿಯಾಗಿತ್ತು.
ತಂದೆ ಮತ್ತು ಮಗನನ್ನ ಒಟ್ಟಿಗೆ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. ಇದೀಗ ಇಬ್ಬರೂ ಕೂಡ ತಮ್ಮ ಪ್ರೀತಿಪಾತ್ರರ ಈ ಆಸೆಯನ್ನು ಈಡೇರಿಸಿದ್ದಾರೆ. ರಾಮ್ ಚರಣ್ ತಮ್ಮ ತಂದೆ ಚಿರಂಜೀವಿ ಜೊತೆ ಮೊದಲ ಬಾರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರಾಮಚರಣ್ ಈ ಸಿನಿಮಾದಲ್ಲಿ ‘ಸಿದ್ಧ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರಂಜೀವಿ ‘ಆಚಾರ್ಯ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಚಿರು ಮತ್ತು ರಾಮ್ ಚರಣ್ ಅವರಲ್ಲದೆ, ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ, ಸೋನು ಸೂದ್, ಜಿಶು ಸೇನ್‌ಗುಪ್ತ, ವೆನೆಲಾ ಕಿಶೋರ್, ಸೌರವ್ ಲೋಕೇಶ್, ಪೋಸಾನಿ ಕೃಷ್ಣ ಮುರಳಿ, ತಣಿಕೇಲಾ ಭರಣಿ, ಅಜಯ್, ಸಂಗೀತಾ, ಬ್ಯಾನರ್ಜಿ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರವನ್ನು ಮೇ 13, 2021 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಕೊರೊನ ಕಾರಣದಿಂದಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಇದೀಗ ಚಿತ್ರ ಬಿಡುಗಡೆಯ ಸಮಯ ಬಂದಿದ್ದು ಆಚಾರ್ಯ ಏಪ್ರಿಲ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.