Ram Charan – ಮೆಗಾ ಮನೆಯಲ್ಲಿ ಟೀಂ ಇಂಡಿಯಾದ ಕ್ರಿಕೆಟಿಗರು
ಟಾಲಿವುಡ್ ನ ನಟ ರಾಮ್ ಚರಣ್ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು.
ಭಾನುವಾರ ಹೈದರಾಬಾದ್ ನಲ್ಲಿ ಆಸ್ಟ್ರೇಲಿಯಾ , ಭಾರತ ನಡುವೆ ಅಂತಿಮ ಟಿ 20 ಪಂದ್ಯ ನಡೆದಿತ್ತು.
ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು, ಎಲ್ಲರಿಗೂ ಗೊತ್ತೇ ಇದೆ.
ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ, ಸೂರ್ಯ ಕುಮಾರ್ ಸೇರಿದಂತೆ ಹಲವು ಆಟಗಾರರು ಚರಣ್ ಮನೆಗೆ ಭೇಟಿ ನೀಡಿದ್ದರು.
ಮನೆಗೆ ಬಂದ ಆಟಗಾರರನ್ನು ಚರಣ್ ಸನ್ಮಾನಿಸಿ ಕೆಲಕಾಲ ತಮಾಷೆ ಮಾಡಿದರು.
ಈ ಪಾರ್ಟಿಯಲ್ಲಿ ಕ್ರಿಕೆಟಿಗರು ಸೇರಿದಂತೆ ರಾಮ್ ಚರಣ್ – ಪತ್ನಿ ಉಪಾಸನಾ, ಮೆಗಾ ಕುಟುಂಬ ಸದಸ್ಯರು ಮತ್ತು ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.