Ram Charan | ಅಲ್ಲೂರಿ ಸೀತಾರಾಮರಾಜು ಆಯ್ತು ಈಗ ರಾಜಾ ಸುಹೇಲ್ ದೇವ್ !!
ಮಗಧೀರ ಸಿನಿಮಾದಲ್ಲಿ ತನ್ನ ರಾಜ್ಯವನ್ನು ರಕ್ಷಿಸುವ ಯೋಧನಾಗಿ ಕಾಲಭೈರವ ಪಾತ್ರದಲ್ಲಿ ಕಾಣಿಸಿಕೊಂಡ ರಾಮ್ ಚರಣ್ ಅವರನ್ನ ಸಾಹಸವನ್ನ ನೋಡಿದ್ದೇವೆ.
ಇದೀಗ ಚರಣ್ ಮಹಾರಾಜಾ ಪಾತ್ರದಲ್ಲಿ ನೋಡೋ ಚಾನ್ಸ್ ಇದೆ ಅನ್ನೋದು ಟಾಲಿವುಡ್ ಟಾಕ್.
11ನೇ ಶತಮಾನದ ರಾಜಾ ಸುಹೇಲ್ ದೇವ್ ಪಾತ್ರದಲ್ಲಿ ರಾಮ್ ಚರಣ್ ನಟಿಸಲಿದ್ದಾರಂತೆ.
ಖ್ಯಾತ ಬರಹಗಾರ ಅಮಿಶ್ ತ್ರಿಪಾಠಿ ಬರೆದ ‘ಲೆಜೆಂಡ್ ಆಫ್ ಸುಹೇಲ್ ದೇವ್: ದಿ ಕಿಂಗ್ ಹೂ ಸೇವ್ಡ್ ಇಂಡಿಯಾ’ ಪುಸ್ತಕವನ್ನು ಆಧರಿಸಿದ ಚಲನಚಿತ್ರವನ್ನು ಈ ಮೊದಲೇ ಘೋಷಿಸಲಾಯಿತು.
ಎರಡು ವರ್ಷಗಳ ಹಿಂದೆ ಈ ಸಿನಿಮಾದ ಪ್ರಿ ಪ್ರೋಡಕ್ಷನ್ ಕೆಲಸ ಶುರುವಾಗಿತ್ತು.
ಆದ್ರೆ ಕೊರೊನಾ ಕಾರಣದಿಂದಾಗಿ ಈ ಸಿನಿಮಾಗೆ ಬ್ರೇಕ್ ಬಿದ್ದಿತ್ತು.

ಇದೀಗ ಈ ಸಿನಿಮಾವನ್ನು ಸೆಟ್ಟೇರಿಸಲು ಅಮಿಷ್ ತ್ರಿಪಾಠಿ ತಯಾರಿ ನಡೆಸುತ್ತಿದ್ದಾರಂತೆ.
ಸುಹೇಲ್ ದೇವ್ ಪಾತ್ರಕ್ಕಾಗಿ ಈ ಹಿಂದೆ ಅಕ್ಷಯ್ ಕುಮಾರ್ ಹೆಸರನ್ನು ತೆಗೆದುಕೊಳ್ಳಲಾಗಿತ್ತಂತೆ.
ಆದ್ರೆ ಈ ಪಾತ್ರಕ್ಕಾಗಿ ಇತ್ತೀಚೆಗೆ ರಾಮ್ ಚರಣ್ ಅವರನ್ನ ಸಂಪರ್ಕಸಿದ್ದಾರಂತೆ. ಚರಣ್ ಕೂಡ ಈ ಸಿನಿಮಾದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ.
ಸುಹೇಲ್ ದೇವ್ ಪಾತ್ರದ ವಿಚಾರಕ್ಕೆ ಬಂದರೇ ಉತ್ತರ ಪ್ರದೇಶದ ಶ್ರಾವಸ್ತಿಯ ರಾಜನಾಗಿದ್ದನು.
ರಾಜ ಸುಹೇಲ್ ದೇವ್ ಬಹ್ರೈಚ್‌ನಲ್ಲಿ ಘಜ್ನಿಯ ಸೈನ್ಯದ ಮೊಹಮ್ಮದ್‌ನನ್ನು ಸೋಲಿಸಿದ್ದನು.
ಈ ಯುದ್ಧ ಹಾಗೂ 11ನೇ ಶತಮಾನದಲ್ಲಿ ಭಾರತದ ಮೇಲೆ ಟರ್ಕಿ ನಡೆಸಿದ ಹಲವಾರು ದಾಳಿಗಳ ಹಿನ್ನೆಲೆಯಲ್ಲಿ ಅಮಿಶ್ ತ್ರಿಪಾಠಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.
ಹಾಗಾದ್ರೆ ಸುಹೇಲ್ ದೇವ್ ಪಾತ್ರದಲ್ಲಿ ರಾಮ್ ಚರಣ್ ನಟಿಸುತ್ತಾರಾ? ಈ ಚಿತ್ರದ ನಿರ್ದೇಶಕರು ಯಾರು? ತಿಳಿಯಬೇಕಾದರೆ ಒಂದಷ್ಟು ದಿನ ಕಾಯಲೇಬೇಕು.