Ram Charan-RC15 : ವಿಭಿನ್ನ ಲುಕ್ ನಲ್ಲಿ ರಾಮ್ ಚರಣ್..
ರಾಮ್ ಚರಣ್ ನಾಯಕನಾಗಿ ಶಂಕರ್ ನಿರ್ದೇಶನದಲ್ಲಿ ಚಿತ್ರವೊಂದು ತಯಾರಾಗುತ್ತಿರುವುದು ಗೊತ್ತೇ ಇದೆ.
ಈ ಚಿತ್ರವನ್ನು ‘ದಿಲ್’ ರಾಜು ನಿರ್ಮಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ಇದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಚರಣ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಒಬ್ಬರು ವಿದ್ಯಾರ್ಥಿ ಮತ್ತು ಇನ್ನೊಬ್ಬರು ಸರ್ಕಾರಿ ಉದ್ಯೋಗಿ.
ಆದರೆ ಇನ್ನೂ ಈ ಸಿನಿಮಾದ ಶೀರ್ಷಿಕೆ ಅಂತಿಮಗೊಂಡಿಲ್ಲ.
ಈ ಹಿನ್ನಲೆಯಲ್ಲಿ ಚಿತ್ರತಂಡ ‘ವಿಶ್ವಂಭರ’, ‘ಸರ್ಕಾರೋಡು’, ‘ಅಧಿಕಾರಿ’ ಮುಂತಾದ ಟೈಟಲ್‌ಗಳನ್ನು ಪರಿಗಣಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಶಂಕರ್ ಸಿನಿಮಾ ಎಂದರೆ ಹೀರೋಗಳು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಈ ಕ್ರಮದಲ್ಲಿ ಈಗ ಈ ಚಿತ್ರದಲ್ಲಿ ಚರಣ್ ಲುಕ್ ಬಗ್ಗೆ ಕುತೂಹಲ ಮೂಡಿದೆ.
ಇತ್ತೀಚೆಗಷ್ಟೇ ಈ ಚಿತ್ರದಲ್ಲಿನ ಚರಣ್ ಶಾಕಿಂಗ್ ಲುಕ್ ಹೊರಬಿದ್ದಿದೆ.
ಇದು ಚರಣ್ ಮೇಕಪ್ ಮಾಡುತ್ತಿರುವ ವಿಡಿಯೋ ತುಣುಕು.
ಚರಣ್ ಗಡ್ಡ ಮತ್ತು ಉದ್ದನೇಯ ಕೂದಳಿನೊಂದಿಗೆ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.