Ram Charan – Salman Khan | ಸಲ್ಮಾನ್ ಖಾನ್ ಸಿನಿಮಾದಲ್ಲಿ ರಾಮ್ ಚರಣ್..
1 min read
ram-charan-salman-khan-film saaksha tv
Ram Charan – Salman Khan | ಸಲ್ಮಾನ್ ಖಾನ್ ಸಿನಿಮಾದಲ್ಲಿ ರಾಮ್ ಚರಣ್..
ಪ್ರಸ್ತುತ ಸ್ಟಾರ್ ಡಮ್ ನಲ್ಲಿರುವ ಹೀರೋಗಳು ಅತಿಥಿ ಪಾತ್ರದಲ್ಲಿ ತೆರೆ ಮೇಲೆ ಬಂದು ಮಿಂಚುತ್ತಿದ್ದಾರೆ.
ತಮ್ಮ ನೆಚ್ಚಿನ ನಟರು ಇತರೆ ಹೀರೋಗಳ ಸಿನಿಮಾದಲ್ಲಿ ನಟಿಸುತ್ತಿರೋದರಿಂದ ಅಭಿಮಾನಿಗಳಿಗೆ ನಟರ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತಿದೆ.
ಮಲ್ಟಿ ಸ್ಟಾರ್ ಸಿನಿಮಾಗಳು ಬಂದಾಗ ಸಿನಿಮಾ ಪ್ರಿಯರು ಕೂಡ ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಕಮಲ್ ಹಸನ್ ನಟನೆಯ ವಿಕ್ರಂ ಸಿನಿಮಾ.
ಹೌದು..! ಈ ಸಿನಮಾದಲ್ಲಿ ನಟ ಸೂರ್ಯ ರೋಲೆಕ್ಸ್ ಪಾತ್ರದಲ್ಲಿ ಕಾಣಿಸಿಕೊಂಡ ಮೂರು ನಿಮಿಷಗಳು ಎಲ್ಲರಲ್ಲೂ ಆಕರ್ಷಿಸಿದರು.
ಹಾಗೆ ಮೆಗಾಸ್ಟಾರ್ ಚಿರಂಜೀವಿ ಗಾಡ್ ಫಾದರ್ ಮೂವಿಯಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದು ಹೀಗಿದ್ದರೇ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕೂಡ ಒಂದು ಸಿನಮಾದಲ್ಲಿ ಸಣ್ಣ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರಂತೆ. ಅದು ಕೂಡ ಸಲ್ಮಾನ್ ಖಾನ್ ಸಿನಿಮಾದಲ್ಲಿ.
ಸಲ್ಮಾನ್ ಖಾನ್ ಅವರ ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ರಾಮ್ ಚರನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.
ಸದ್ಯ ಶೂಟಿಂಗ್ ಹಂತದಲ್ಲಿರುವ ಈ ಸಿನಮಾದಲ್ಲಿ ತೆಲುಗಿನ ಸ್ಟಾರ್ ನಟ ವೆಂಕಟೇಶ್ ಕೂಡ ನಟಿಸುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯಲಿದೆ.
ಇಲ್ಲಿ ಸಲ್ಮಾನ್ ಮತ್ತು ಚರಣ್ ಸೀನ್ ಗಳನ್ನು ಚಿತ್ರೀಕರಣ ಮಾಡಲಾಗುತ್ತದೆ ಅನ್ನೋದು ಸಮಾಚಾರ.