Ram charan | ಮೆಗಾ ಫ್ಯಾನ್ಸ್ ಗೆ ಶುಭ ಸುದ್ದಿ… ಆಸ್ಕರ್ ರೇಸ್ ನಲ್ಲಿ ರಾಮ್ ಚರಣ್
ಯಂಗ್ ಟೈಗರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿದ ಪಾನ್ ಇಂಡಿಯಾ ಸಿನಿಮಾ ಆರ್ ಆರ್ ಆರ್.
ನಿರ್ದೇಶಕ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ನ ಈ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ಕಲೆಕ್ಷನ್ ಗಳ ಸುನಾಮಿಯನ್ನ ಎಬ್ಬಿಸಿತ್ತು.
ಇಂಡಿಯಾಸ್ ಬಿಗ್ಗೆಸ್ಟ್ ಯಾಕ್ಷನ್ ಎಂಟರ್ ಟೈನರ್ ಆಗಿ ಬಂದ ಈ ಸಿನಿಮಾದಲ್ಲಿ ತಾರಕ್ ಕೊಮರಂಭೀಮ್ ಪ್ರಾತದಲ್ಲಿ ಕಾಣಿಸಿಕೊಂಡರೇ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಆಗಿ ಮಿಂಚಿದರು.
ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದರು.
ಈ ಸಿನಿಮಾದಲ್ಲಿ ಆಲಿಯಾ ಭಟ್, ಒಲಿವಿಯಾ ಮೋರಿಸ್ ನಾಯಕನಟಿಯರಾಗಿದ್ದರು.
ಈ ನಡುವೆ ಈ ಸಿನಿಮಾಗೆ ಸಂಬಂಧಿಸಿದ ವಿಷಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಮೆರಿಕಾ ಮೂಲದ ಪ್ರಮುಖ ಮ್ಯೂವಿ ಪಬ್ಲಿಕೇಷನ್ಸ್ ವೆರೈಟಿ, ಆಸ್ಕರ್ 2023ರ ಬೆಸ್ಟ್ ಆಕ್ಟರ್ ಪಟ್ಟಿಯಲ್ಲಿ ಜ್ಯೂನಿಯರ್ ಎನ್ ಟಿಆರ್ ಗೆ ಪ್ರಶಸ್ತಿ ಬರುವ ಸಾಧ್ಯತೆಗಳಿದೆ ಎಂದಿದ್ದು ಗೊತ್ತೇ ಇದೆ.
ಇದೀಗ ಈ ಪಟ್ಟಿಯಲ್ಲಿ ರಾಮ್ ಚರಣ್ ಹೆಸರು ಕೂಡ ಇದೆ ಎಂದು ವೆಬ್ ಸೈಟ್ ವೊಂದು ಪ್ರಕಟ ಮಾಡಿದೆ.