ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಮಧ್ಯೆ ಇರುವಂತಹ ಪರಮ ಪುಣ್ಯ ಕ್ಷೇತ್ರ ಪಾಂಡೇಶ್ವರ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಶ್ಚಿಮಕ್ಕೆ ಮುಖ ಮಾಡಿ ನಿಂತಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಪುರಾತನ ಕಾಲದಲ್ಲಿ ಸಮುದ್ರದ ಅಬ್ಬರ ತಗ್ಗಿಸಲು ಶ್ರೀ ಮಹಾಲೀಂಗೇಶ್ವರ ದೇವರನ್ನು ಪಶ್ಚಿಮಾಭಿಮುಖವಾಗಿ ಋಷಿಮುನಿಗಳು ಪ್ರತಿಷ್ಠಾಪಿಸಿರುತ್ತಾರೆ. ನಂತರದಲ್ಲಿ ಗ್ರಾಮೀಣ ಭಾಷೆಯಲ್ಲಿ ಶ್ರೀ ಕ್ಷೇತ್ರದ ಹೆಸರು ಪಡ್ಡಾಯಿ ಮಹಾಲೀಂಗೇಶ್ವರ ದೇವಸ್ಥಾನ (ಪಶ್ಚಿಮ ಮಹಾಲಿಂಗೇಶ್ವರ ದೇವಸ್ಥಾನ) ಎಂಬುದಾಗಿತ್ತು. ನಂತರದಲ್ಲಿ ದ್ವಾಪರ ಕಾಲದಲ್ಲಿ ಪಾಂಡವರ ವನವಾಸದ ಸಂದರ್ಭದಲ್ಲಿ ಮಧ್ಯಮ ಪಾಂಡವನಾದ ಅರ್ಜುನನಿಗೆ ಕಿರಾತನ ರೂಪದಲ್ಲಿ ದರುಶನವಿತ್ತು ತಾನು ಇರುವ ನೆಲೆಯನ್ನು ಮಹಾಲಿಂಗೇಶ್ವರ ದೇವರು ಸೂಚಿಸಿದ ಸಂದರ್ಭ ಪಾಂಡವರೆಲ್ಲ ಒಟ್ಟು ಸೇರಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದ ನಂತರ ಶ್ರೀ ಕ್ಷೇತ್ರ ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ ಎಂದು ಹೆಸರು ವಾಸಿಯಾದ ಬಗ್ಗೆ ಪ್ರತೀತಿ ಇದೆ. ಅಷ್ಟಮಂಗಳ ಪ್ರಶ್ನೆಯಲ್ಲಿಯೂ ಇದರ ಬಗ್ಗೆ ತಿಳಿದು ಬಂದಿರುತ್ತದೆ.
ದೇವಸ್ಥಾನ ಪ್ರವೇಶಿಸುವಾಗ ಮುಖ್ಯ ದ್ವಾರದಲ್ಲಿ ಶಿವನ ಧ್ಯಾನಕ್ಕೆ ಕುಳಿತಿರುವ 12 ಅಡಿ ಎತ್ತರದ ಶಿವನ ಧ್ಯಾನ ಮೂರ್ತಿ ಇರುವ ಸ್ವಾಗತ ಗೋಪುರದ ಮೇಲೆ ಇದೆ. ಹೊರಾಂಗಣದ ಬಲಬದಿಯಲ್ಲಿ ಶ್ರೀ ದೇವರ ವಸಂತ ಕಟ್ಟೆ ಇದೆ. ಎಡ ಬದಿಯಲ್ಲಿ ಶ್ರೀ ವೈಷ್ಣವೀ ದೇವಿಯ ಶಿಲಾಮಯ ಗುಡಿ ಇದ್ದು ಗುಡಿಯ ಒಳಗೆ ಆಳೆತ್ತರದ ಶ್ರೀ ವೈಷ್ಣವೀ ದೇವಿಯು ನಿಂತಿರುವ ಶಿಲಾಮೂರ್ತಿ ಇದ್ದು, ಶ್ರೀ ದೇವಿಯು ಗುಡಿಯ ಬಲಬದಿಯಲ್ಲಿ ಶ್ರೀ ಆಂಜನೇಯ ಸ್ವಾಮಿಯು 21 ಅಡಿ ಎತ್ತರದ ವಿಗ್ರಹವಿದೆ. ದೇವಾಲಯಗಳನ್ನು ಒಳಗೆ ಪ್ರವೇಶಿಸುವಾಗ ಎದುರಿಗೆ ಸಿಗುವುದು ನಂದಿ ದೇವರು ಕುಳಿತಿರುವ ಶಿಲಾಮಯ ತೀರ್ಥ ಮಂಟಪ. ಮುಖ್ಯ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಮೂಲ ಲಿಂಗವಿದ್ದು ಲಿಂಗದ ಎಡ ಬದಿಯಲ್ಲಿ ಮಹಾಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಇದೆ. ಗರ್ಭಗುಡಿಯ ಬಲ ಬದಿಯಲ್ಲಿ ಶ್ರೀ ಮಹಾಗಣಪತಿ ದೇವರ ಗುಡಿ, ಎಡಬದಿಯಲ್ಲಿ ಕ್ಷೇತ್ರಪಾಲರಾದ ವೈದ್ಯನಾಥ ಮುಂಡಿತ್ತಾಯ, ಶ್ರೀ ಅಣ್ಣಪಂಜುರ್ಲಿ ದೈವಗಳ ಗುಡಿಯಿದೆ. ದೇವಾಲಯದ ಮುಂದೆ ಪುರಾತನ ಕಾಲದಿಂದಲೂ ಇರುವ ಅರಳಿ ವೃಕ್ಷ ಇದ್ದು, ಇದರ ಕೆಳಗೆ ನಾಗದೇವರ ಬಿಂಬಗಳು ಇವೆ. ಅರಳೀ ವೃಕ್ಷದ ಬಲಬದಿಯಲ್ಲಿ ಶ್ರೀ ದೇವರ ಗುಳಿಗ ದೈವದ ಕಟ್ಟೆಯಿದೆ ಹಾಗೂ ಕಟ್ಟೆಯ ಸುತ್ತ ನವಗ್ರಹಗಳ ಬಿಂಬವಿದೆ. ಕಟ್ಟೆಯ ಎಡಭಾಗದಲ್ಲಿ ಮಹಾಲಿಂಗೇಶ್ವರ ಸ್ವಾಮಿಗೆ ಮುಖಮಾಡಿ ಕುಳಿತ 7 ಅಡಿ ಎತ್ತರದ ನಂದಿ ದೇವರ ಮೂರ್ತಿ ಇದೆ. ನಾಗನ ಕಟ್ಟೆಯ ಮುಂದೆ 8 ಅಡಿ ಎತ್ತರದ ಹಾಗೂ 3 ಅಡಿ ಅಗಲದ ಶಿಲಾಶಾಸನ ಕಲ್ಲು ಇದೆ. ಆದರೆ ಈ ಶಿಲಾಶಾಸನದ ಲಿಪಿಯನ್ನು ಈವರೆಗೂ ಯಾರಿಂದಲೂ ಓದಲು ಆಗಿರುವುದಿಲ್ಲ.
ಬಾಗಿಲು ತೆರೆಯುವ ಸಮಯ
05:30 AM IST – 01:30 PM IST
04:30 PM IST – 08:30 PM IST
ಬಾಗಿಲು ಮುಚ್ಚುವ ಸಮಯ
01:30 PM IST – 04:30 PM IST








