ದ್ರೌಪದಿ ಮುರ್ಮು ಕುರಿತು ಟ್ವೀಟ್ – ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್ ದಾಖಲು
ಸದಾ ಒಂದಲ್ಲ ಒಂದು ವಿವಾದಾತ್ಮಕ ಸುದ್ದಿಗಳಿಂದಲೇ ಸದ್ದು ಮಾಡುವ ರಾಮ್ ಗೋಪಾಲ್ ವರ್ಮಾ ಇದೀಗ NDA ಸೂಚಿತ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ವರ್ಮಾ ಅವರ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಎನ್.ಡಿ.ಎ ತನ್ನ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಎಂದು ಘೋಷಿಸುತ್ತಿದ್ದಂತೆಯೇ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ‘ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು, ಎಲ್ಲದಕ್ಕಿಂತ ಕೌರವರು ಯಾರು” ಎಂದು ಅವಹೇಳನ ಮಾಡುವಂತೆ ಟ್ವಿಟ್ ಮಾಡಿದ್ದರು.
ಈ ಟ್ವಿಟ್ ಇದೀಗ ದ್ರೌಪದಿ ಮುರ್ಮು ಬೆಂಬಲಿಗರನ್ನು ಕೆರಳಿಸಿದೆ. ಹಾಗಾಗಿ ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ. ನಂದೇಶ್ವರ ಗೌಡ ಅವರು ಹೈದರಾಬಾದ್ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಆಂಧ್ರದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲೂ ದೂರು ದಾಖಲಾಗುತ್ತಿವೆ. ಟ್ವೀಟ್ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಕೂಡ ಅವರ ವಿರುದ್ಧ ವಾಗ್ದಾಳಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
https://twitter.com/RGVzoomin/status/1540259536493113345?ref_src=twsrc%5Etfw%7Ctwcamp%5Etweetembed%7Ctwterm%5E1540259536493113345%7Ctwgr%5E%7Ctwcon%5Es1_&ref_url=https%3A%2F%2Fwww.amarujala.com%2Fphoto-gallery%2Fentertainment%2Fbollywood%2Fram-gopal-varma-is-in-trouble-for-his-controversial-tweet-on-draupadi-murmu-bjp-leaders-filed-complaint-against-the-filmmaker
ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವರ್ಮಾ ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ದ್ರೌಪದಿ ನನಗೆ ಇಷ್ಟವಾದ ಪಾತ್ರ. ಹಾಗಾಗಿ ನಾನು ವ್ಯಂಗ್ಯ ಮಾಡಿದೆ. ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರು ಕಡಿಮೆ. ಈ ಹೆಸರು ಕೇಳಿದಾಕ್ಷಣ ನನಗೆ ಮಹಾಭಾರತದ ದ್ರೌಪದಿ ನೆನಪಾದರು. ಈ ರೀತಿ ಟ್ವಿಟ್ ಮಾಡುವುದರ ಹಿಂದೆ ಯಾವುದೇ ಕೆಟ್ಟ ಉದ್ದೇಶವಿಲ್ಲ’ ಎಂದಿದ್ದಾರೆ.








