ಆಂಧ್ರ ಸರ್ಕಾರದ ಮುಂದೆ ಪ್ರಶ್ನೆಗಳ ಪಟ್ಟಿ ಇಟ್ಟ ವರ್ಮಾ..!
ಆಂಧ್ರಪ್ರದೇಶ : ತೆಲಂಗಾಣ ಸರ್ಕಾರ ಟೊಂಕ ಕಟ್ಟಿ ಸಿನಿಮಾರಂಗದ ವಿರುದ್ಧ ಸಮರ ಸಾರಿದ್ದು , ಸಿನಿಮಾರಂಗವೂ ಸರ್ಕಾರದ ನಡೆ ವಿರುದ್ಧ ಸಿಡಿದೆದ್ದಿದೆ.. ಮೊದಲೇ ಕೋವಿಡ್ ಕಾಟದಿಂದ 2 ವರ್ಷಗಳ ಕಾಲ ರೋಸಿಹೋಗಿದ್ದ ಸಿನಿಮಾರಂಗದ ಗಾಯದ ಮೇಲೆ ತೆಲಂಗಾಣ ಸರ್ಕಾರ ಬರೆ ಎಳೆದಿದೆ..
ಪವನ್ ಕಲ್ಯಾಣ್ , ಅಲ್ಲು ಅರ್ಜುನ್ , ಮೋಹನ್ ಬಾಬು , ನಾನಿ ಸೇರಿದಂತೆಅನೇಕ ಸ್ಟಾರ್ ಗಳು ಸೇರಿದಂತೆ ತೆಲುಗು ಸಿನಿಮಾರಂಗದವರು ಆಂಧ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.. ಹೌದು ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿರುವ ಆಂಧ್ರ ಸರ್ಕಾರದ ಆದೇಶದಿಂದ ಬಿಗ್ ಬಜೆಟ್ ಸಿನಿಮಾಗಲಿಗೆ ದೊಡ್ಡ ಪೆಟ್ಟು ಬೀಳುತ್ತಿದೆ.. ಇದೀಗ ಕಾಂಟ್ರವರ್ಸಿಯಲ್ ನಿರ್ದೇಶಕರಾಗಿಯೇ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಅವರು ಆಂಧ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.. ಟ್ವೀಟ್ ಮಾಡಿ ಆಂಧ್ರ ಸರ್ಕಾರಕ್ಕೆ ಖಾರವಾಗಿ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ..
ಮೊದಲನೇಯದ್ದಾಗಿ ಒಬ್ಬ ಉತ್ಪಾದಕ ಹಾಗೂ ಗ್ರಾಹಕನ ನಡುವೆ ಇರುವ ನೇರ ಸಂಬಂಧದ ಮಧ್ಯೆ ಸರ್ಕಾರಕ್ಕೆ ಮೂಗು ತೂರಿಸುವ ಅಧಿಕಾರವೆದೆಯಾ..??? ಗ್ರಾಹಕ ಹಾಗೂ ಉತ್ಪಾದಕನ ನಡುವೆ ಈಗಾಗಲೇ ಸ್ಥಾಪಿತವಾಗಿರುವ ಸಂಬಂಧದ ನಡುವೆ ಸರ್ಕಾರ ಮೂಗು ತೂರಿಸುವುದು ಸರೀನಾ..??? ಗ್ರಾಹಕ ಹಾಗೂ ಉತ್ಪಾದಕರ ನಡುವೆ ವಿಶ್ವಾಸವಿಲ್ಲದೇ ಇದ್ದರೆ ಅಥವ ಕೆಲವು ವ್ಯತಿರಿಕ್ತ ಸಂದರ್ಭಗಳ ಹೊರತಾಗಿ ಸರ್ಕಾರ ಈ ವ್ಯವಹಾರದಲ್ಲಿ ಮೂಗು ತೂರಿಸುವಂತಿಲ್ಲ.. ಆದ್ರೆ ಪ್ರೇಕ್ಷಕರಾಗಲಿ , ಸಿನಿಮಾರಂಗದ ನಡುವೆ ಯಾವುದೇ ಸಮಸ್ಯೆ ಇಲ್ಲ ಆದ್ರೂ ಸಹ ಸರ್ಕಾರ ಮೂಗು ತೂರಿಸುತ್ತಿರೋದ್ಯಾಕೆ..??? ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ..
ಇದೇ ವೇಳೆ ಯಾವುದೇ ಉತ್ಪಾದಕ ಉತ್ಪಾದಿಸಿದ ವಸ್ತುವಿಗೆ ಸರ್ಕಾರ ಬೆಲೆ ನಿಗದಿ ಪಡಿಸುವುದು ಎಷ್ಟು ಸರಿ..?? ಉತ್ಪಾದಕನಿಗೆ ಆಗಿರುವ ಖರ್ಚನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರವು ಏಕಪಕ್ಷೀಯವಾಗಿ ಬೆಲೆ ನಿಗದಿ ಪಡಿಸಬಹು…?? ಸಿನಿಮಾ ಎಂಬುದು ಜನರಿಗೆ ಬಹಳ ಅವಶ್ಯಕ ಎಂದು ಸರ್ಕಾರವೇ ಇತ್ತೀಚೆಗೆ ಹೇಳಿದೆ ಹಾಗಾಗಿ ಟಿಕೆಟ್ ದರ ಇಳಿಸಿರುವುದಾಗಿ ಹೇಳುತ್ತಿದೆ. ಸಿನಿಮಾಗಳು ಜನಗಳಿಗೆ, ಬಡವರಿಗೆ ಅವಶ್ಯಕವಾಗಿ ಬೇಕಾಗಿರುವುದು ಎಂದು ಸರ್ಕಾರ ನಿರ್ಧರಿಸಿರುವಾಗ ಸರ್ಕಾರ ಏಕೆ ನಿರ್ಮಾಪಕರಿಗೆ ಸಬ್ಸಿಡಿ ನೀಡಿ ಇನ್ನೂ ಹೆಚ್ಚು ಹೆಚ್ಚು ಸಿನಿಮಾ ನಿರ್ಮಾಣ ಮಾಡಲು ಪ್ರೋತ್ಸಾಹ ನೀಡಬಾರದು..? ಎಂದು ಪ್ರಶ್ನೆ ಕೇಳಿದ್ದಾರೆ.
ಅಲ್ಲದೇ ರೇಷನ್ ಅಂಗಡಿಗಳು ಅಥವಾ ನ್ಯಾಯ ಬೆಲೆ ಅಂಗಡಿಗಳ ಮೂಲಕ ಸರ್ಕಾರವು ರೈತರಿಂದ ವಸ್ತು ಖರೀದಿಸಿ ಕಡಿಮೆ ಬೆಲೆಗೆ ಜನರಿಗೆ ನೀಡುತ್ತಿರುವ ಮಾದರಿಯಲ್ಲಿಯೇ, ಸರ್ಕಾರವೇ ನಮ್ಮ ಸಿನಿಮಾಗಳನ್ನು ನಮ್ಮ ಬೆಲೆಗೆ ಖರೀದಿಸಿ ‘ನ್ಯಾಯಬೆಲೆ ಚಿತ್ರಮಂದಿರ’ಗಳನ್ನು ಸ್ಥಾಪಿಸಿ ಕಡಿಮೆ ಬೆಲೆಗೆ ಸಿನಿಮಾಗಳನ್ನು ಯಾಕೆ ತೋರಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ.. ಅಲ್ಲದೇ ಯಾವ ಬೆಲೆಗೆ ಚಿತ್ರಮಂದಿರಗಳ ಟಿಕೆಟ್ ಅನ್ನು ಮಾರಬೇಕು ಎಂದು ನಿರ್ಮಾಪಕರು, ಚಿತ್ರಮಂದಿರಗಳ ಮಾಲೀಕರು ಬೇಡಿಕೆ ಇಟ್ಟಿದ್ದಾರೆಯೋ ಅದೇ ಬೆಲೆಗೆ ಸರ್ಕಾರವೇ ಟಿಕೆಟ್ಗಳನ್ನು ಖರೀದಿಸಿ ಅದನ್ನು ಜನರಿಗೆ ಉಚಿತವಾಗಿಯೋ ಅಥವಾ ಕಡಿಮೆ ಬೆಲೆಗೋ ಮಾರಾಟ ಮಾಡಿದರೆ ನಮಗೆ ನಮ್ಮ ಹಣವೂ ಸಿಗುತ್ತದೆ, ನಿಮಗೆ ನಿಮ್ಮ ಓಟುಗಳೂ ಸಿಗುತ್ತವೆ, ಈ ಐಡಿಯಾ ಹೇಗಿದೆ ಎಂದು ವ್ಯಂಗ್ಯಾತ್ಮಕವಾಗಿ ಪ್ರಶ್ನಿಸಿ ಸಲಹೆ ನೀಡಿದ್ದಾರೆ.
ಇದೇ ವೇಳೆ ಸ್ಟಾರ್ ನಟರಿಗೆ ದೊಡ್ಡ ಸಂಭಾವನೆ ಕೊಟ್ಟು ಸಿನಿಮಾಗಳ ಬಜೆಟ್ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತೀರಿ. ಸ್ಟಾರ್ ನಟರನ್ನು ನೋಡಿಯೇ ಚಿತ್ರಮಂದಿರಕ್ಕೆ ಜನ ಬರುವುದು. ಸ್ಟಾರ್ ನಟರು ಎಂದ ಮಾತ್ರಕ್ಕೆ ಅವರಿಗೆ ಹೆಚ್ಚು ಸಂಭಾವನೆ ನೀಡುವುದಿಲ್ಲ. ನಿರ್ಮಾಪಕರು ಬುದ್ಧಿವಂತರು ನಟರ ಈ ಹಿಂದಿನ ಸಿನಿಮಾಗಳ ಕಲೆಕ್ಷನ್ ಎಲ್ಲವನ್ನೂ ನೋಡುತ್ತಾರೆ. ಅದೂ ಅಲ್ಲದೆ ಸಂಭಾವನೆ ಎನ್ನುವುದು ಪಡೆಯುವವನ, ನೀಡುವವನ ನಡುವೆ ನಡೆವ ವ್ಯವಹಾರ ಅದನ್ನು ಪ್ರಶ್ನಿಸಲು ನೀವು ಯಾರು ಎಂದು ಆಂಧ್ರಪ್ರದೇಶದ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ. ಹೀಗೆ ಇನ್ನೂ ಸಾಲು ಸಾಲು ಪ್ರಶ್ನೆಗಳನ್ನ ಕೇಳಿ ಆಂಧ್ರ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ ರಾಮಗೋಪಾಲ್ ವರ್ಮಾ ಅವರು..