RGV | ಬಾಲಿವುಡ್ ಬಗ್ಗೆ ಮತ್ತೊಮ್ಮೆ ಆರ್ ಜಿವಿ ಶಾಕಿಂಗ್ ಕಾಮೆಂಟ್ಸ್

1 min read

RGV | ಬಾಲಿವುಡ್ ಬಗ್ಗೆ ಮತ್ತೊಮ್ಮೆ ಆರ್ ಜಿವಿ ಶಾಕಿಂಗ್ ಕಾಮೆಂಟ್ಸ್

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದಾರಿ ಪ್ರತ್ಯೇಕ. ಪ್ರತಿದಿನ ಸೆಲೆಬ್ರೆಟಿ, ಇಂಡಸ್ಟ್ರೀ ಬಗ್ಗೆ  ವಿಡಂಬನಾತ್ಮಕ ಕಾಮೆಂಟ್‌ ಗಳನ್ನು ಮಾಡುವ ಮೂಲಕ ಮುನ್ನೆಲೆಗೆ ಬರುತ್ತಲೇ ಇರುತ್ತಾರೆ.

ಎಲ್ಲರಿಗಿಂತ ಭಿನ್ನವಾದ ಕಾಮೆಂಟ್‌ಗಳನ್ನು ಮಾಡುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿ ನಿಲ್ಲುತ್ತಾರೆ. ಸೆನ್ಸೇಷನಲ್ ಕಮೆಂಟ್ ಮಾಡುವುದರಲ್ಲಿ ವರ್ಮಾ ಕೇರಾಫ್ ಅಡ್ರೆಸ್.

ಇತ್ತೀಚೆಗಷ್ಟೇ ಆರ್‌ಆರ್‌ಆರ್ ಮತ್ತು ಪುಷ್ಪ ಕೆಜಿಎಫ್2 ಚಿತ್ರಗಳು ದಕ್ಷಿಣ ಭಾರತದಿಂದ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಆಗಿದ್ದು, ಆರ್‌ಜಿವಿ ಸರಣಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಥಿಯೇಟರ್‌ ಗಳಲ್ಲಿ ದಕ್ಷಿಣ ಭಾರತದ ಚಿತ್ರಗಳ ಯಶಸ್ಸು ಮತ್ತು ಉತ್ತರ ಚಲನಚಿತ್ರಗಳ ವೈಫಲ್ಯವನ್ನು ನೋಡಿದರೆ, ಶೀಘ್ರದಲ್ಲೇ ಬಾಲಿವುಡ್‌ ನಲ್ಲಿ ಕೇವಲ OTT ಗಾಗಿ ಚಿತ್ರಗಳನ್ನು ಮಾಡಲಾಗುತ್ತದೆ ಎಂದು ತೋರುತ್ತದೆ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಹೊಸ ಚರ್ಚೆಗೆ ಕಾರಣವಾಗಲಿದೆ.

ram-gopal-varma-says-bollywood-should-make-films-only-ott saaksha tv
ram-gopal-varma-says-bollywood-should-make-films-only-ott saaksha tv

ಇದಲ್ಲದೇ ಮಹೇಶ್ ಅವರ ಹೇಳಿಕೆಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಪ್ರತಿಕ್ರಿಯಿಸಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವರ್ಮಾ, ”ಮಹೇಶ್ ಅವರ ಕಾಮೆಂಟ್‌ಗಳು ತಪ್ಪಾಗುವುದಿಲ್ಲ.

ಯಾಕೆಂದರೆ ಒಬ್ಬ ನಟನಾಗಿ ಎಲ್ಲಿ ಸಿನಿಮಾ ಮಾಡಬೇಕುಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಇನ್ನು ಬಾಲಿವುಡ್ ನನ್ನನ್ನು ಸಹಿಸಿಕೊಳ್ಳಲ್ಲ ಎಂಬ ಮಹೇಶ್ ಮಾತು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ram-gopal-varma-says-bollywood-should-make-films-only-ott

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd