ನವದೆಹಲಿ : ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದೆ. ಇದಕ್ಕೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಇದರ ಮಧ್ಯೆ ಅಯೋಧ್ಯೆ ರಾಮಮಂದಿರ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ನಲ್ಲಿ, ಶ್ರೀರಾಮ ಸರಳತೆ, ಸಾಹಸ, ಸಂಯಮ, ತ್ಯಾಗ, ವಚನಬದ್ಧತೆ, ದೀನಬಂಧುವಾಗಿದ್ದಾನೆ. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ. ಭಗವಾನ್ ರಾಮ ಹಾಗೂ ಸೀತಾ ಮಾತೆಯ ಸಂದೇಶ ಹಾಗೂ ಕೃಪೆಯೊಂದಿಗೆ ರಾಮಲಲ್ಲಾದಲ್ಲಿ ನಡೆಯುತ್ತಿರುವ ಭೂಮಿ ಪೂಜೆ ರಾಷ್ಟ್ರೀಯ ಏಕತೆ, ಬಂಧುತ್ವ ಹಾಗೂ ಸಂಸ್ಕೃತಿಕ ಸಮಾಗಮದ ಅವಕಾಶವಾಗಲಿ” ಎಂದು ಬರೆದುಕೊಂಡಿದ್ದಾರೆ.
https://twitter.com/priyankagandhi/status/1290528776409866241?s=20
ಜೊತೆಗೆ ಹಿಂದಿಯಲ್ಲಿ ಬರೆದಿರುವ ಕಾಂಗ್ರೆಸ್ ಪಕ್ಷದ ಚಿನ್ಹೆ ಇರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ. ಪತ್ರದಲ್ಲಿ ಕೊನೆಗೆ ಜೈ ಶ್ರೀರಾಮ್ ಎಂದು ಬರೆಯಲಾಗಿದೆ.