ಅಯೋಧ್ಯೆ : ನಾಳೆ ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ನಡೆಯಲಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಸದ್ಯ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದರೇ ಅತ್ತ ರಾವಣನ ಜನ್ಮಸ್ಥಳ ಎನ್ನಲಾಗುವ ಗೌತಮಬುದ್ಧ ನಗರದಲ್ಲಿರುವ ಬಿಸ್ರಾಖ್ ನಲ್ಲಿ ಕೂಡ ಸಡಗರ ಮನೆ ಮಾಡಿದೆ.
ಹೌದು..! ಬಿಸ್ರಾಖ್ ನಲ್ಲಿ ರಾವಣನ ದೇವಾಲಯವಿದ್ದು, ಅದರ ಅರ್ಚಕರೂ ಸಹ ರಾಮಮಂದಿರ ಭೂಮಿ ಪೂಜೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಮಮಂದಿರ ಭೂಮಿಪೂಜೆ ಕುರಿತು ರಾವಣನ ದೇವಸ್ಥಾನದ ಅರ್ಚಕ ಮಹಾಂತ್ ರಾಮ್ ದಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾಳಿನ ಭೂಮಿಪೂಜೆಯ ಬಗ್ಗೆ ಉತ್ಸುಕನಾಗಿದ್ದೇನೆ. ತುಂಬ ಸಂತೋಷ ಉಂಟಾಗುತ್ತಿದೆ. ನಾಳೆ ಸಮಾರಂಭ ಮುಗಿಯುತ್ತಿದ್ದಂತೆ ಲಡ್ಡು ವಿತರಣೆ ಮಾಡುತ್ತೇನೆ. ಸಂಭ್ರಮವನ್ನು ಆಚರಿಸುತ್ತೇವೆ. ಅಲ್ಲಿ, ಭವ್ಯವಾದ ರಾಮಮಂದಿರ ನಿರ್ಮಾಣ ಆಗುತ್ತಿರುವುದು ತುಂಬ ಸಂತೋಷ ತಂದಿದೆ ಎಂದಿದ್ದಾರೆ.
ಇನ್ನು ಉತ್ತರ ಪ್ರದೇಶದ ಬಿಸ್ರಾಖ್ ರಾವಣನ ಹುಟ್ಟೂರು ಎನ್ನಲಾಗಿದ್ದು, ಈ ಹಳ್ಳಿಯ ಹೆಸರು ಪೂರ್ವದಲ್ಲಿ ವಿಶ್ವೇಷ್ವರಾ ಎಂದಾಗಿತ್ತು. ಹಳ್ಳಿಗೆ ಈ ಹೆಸರು ರಾವಣನ ತಂದೆ ವಿಶ್ರವಾ ಋಶಿಯಿಂದಾಗಿ ಬಂದಿತ್ತೆನಲಾಗುತ್ತದೆ. ಈ ಊರಿನಲ್ಲಿ ರಾವಣನನ್ನು ಪೂಜಿಸಲಾಗುತ್ತದೆ. ದಸರಾದಂದು ಇಲ್ಲಿ ರಾವಣನನ್ನು ಸುಡುವ ಪದ್ಧತಿ ಇಲ್ಲ.