ನವದೆಹಲಿ: ಮುಸ್ಲಿಂ ಮಹಿಳೆಯೊಬ್ಬರಿಗೆ ಶ್ರೀರಾಮ (Lord Ram) ಕನಸಿನಲ್ಲಿ ಕಾಣಿಸಿಕೊಂಡಿದ್ದು, ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಸೂಚಿಸಿದ್ದಾನೆ ಎಂದು ಹೇಳಿದ್ದಾರೆ.
ಹೀಗಾಗಿ ಜ. 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ (Ayodhya Ram Mandir) ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಸೂಚಿಸಿದ್ದಾನೆ ಎಂದಿರುವ ಮಹಿಳೆ, ಪಾದಯಾತ್ರೆ ಹೊರಟಿದ್ದಾರೆ. ಶಬ್ನಮ್ ಖಾನ್ (Shabnam Khan) ಸುಮಾರು 700 ಕಿ.ಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದು, ಈಗಾಗಲೇ 400 ಕಿ.ಮೀ ಪ್ರಯಾಣ ಮಾಡಿದ್ದಾರೆ.
ಮುಸ್ಲಿಂ ಆಗಿದ್ದರೂ ಭಗವಾನ್ ರಾಮನ ಮೇಲಿನ ಅಚಲ ಭಕ್ತಿಯಿಂದಾಗಿ ಈ ಪ್ರಯಾಣ ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ. ನನ್ನ ಕನಸಿನಲ್ಲಿ ಭಗವಾನ್ ರಾಮ ಕಾಣಿಸಿಕೊಂಡ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದಿದ್ದಾಗ ಅದಕ್ಕಾಗಿ ಹೋರಾಟ ಮಾಡುತ್ತಿದ್ದೆ. ಈಗ ಮಂದಿರ ಸಿದ್ಧವಾಗಿರುವಾಗ ನೀನೇಕೆ ಬರುತ್ತಿಲ್ಲ ಎಂದು ರಾಮ ಪ್ರಶ್ನಿಸಿದ್ದಾನೆ. ಹೀಗಾಗಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದೇನೆ ಎಂದು ಹೇಳಿದ್ದಾರೆ.