Ramanagara : ಮಾಜಿ ಸಿಎಂ HDK ಕರ್ಮಭೂಮಿ ತಲುಪಿದ ಪಂಚರತ್ನ ರಥಯಾತ್ರೆ….
ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಜೆ ಡಿ ಎಸ್ ನ ಪಂಚರತ್ನ ಯಾತ್ರೆ ಇಂದು ರಾಮನಗರವನ್ನ ತಲುಪಿದೆ.
ಮಾಜಿ ಸಿಎಂ ಕರ್ಮಭೂಮಿಯಲ್ಲಿ ರಥಯಾತ್ರೆ ಸಕಲ ಸಿದ್ದತೆ ನಡೆಸಲಾಗಿದ್ದು, ಸುಗ್ಗನಹಳ್ಳಿ ಹೋಬಳಿಯ ಗುಡ್ಡದಹಳ್ಳಿಯಿಂದ ರಥಯಾತ್ರೆ ಆರಂಭವಾಗಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿ ಬಂದಿದ್ದು, ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನ ಸ್ವಾಗತಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.
ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದ್ದು, ರಾಮನಗರ, ಹಾರೋಹಳ್ಳಿ ತಾಲೂಕಿನಲ್ಲಿ ಸಂಚರಿಸಲಿದೆ. ಈಗಾಗಲೇ ಅಭೂತಪೂರ್ವ ಯಶ ಕಂಡಿರುವ ಪಂಚರತ್ನ ಯಾತ್ರೆಗೆ ಹೋದಲೆಲ್ಲ ಭಾರೀ ಜನಸ್ಪಂದನೆ ಸಿಗುತ್ತಿದೆ.
ರಾಮನಗರದ ಸುಗ್ಗನಹಳ್ಳಿ ಹೋಬಳಿಯ ಗುಡ್ಡದಹಳ್ಳಿ, ಹಾಗಲಹಳ್ಳಿ, ಸುಗ್ಗನಹಳ್ಳಿ, ಹಳ್ಳಿಮಾಳ, ಮದರಸಾಬರದೊಡ್ಡಿ, ಹರಿಸಂದ್ರ, ಕೆಂಪೇಗೌಡನ ದೊಡ್ಡಿಯಲ್ಲಿ ರಥಯಾತ್ರೆ ಸಾಗಿ ಬಳಿಕ ರಾಮನಗರ ಸಿಟಿಯನ್ನ ಪ್ರವೇಶಿಸಲಿದೆ.
ರಾಮನಗರದ ಕೆಂಪೇಗೌಡ ಸರ್ಕಲ್, ಹಳೆ ಬಸ್ ನಿಲ್ದಾಣದ ನಂತರ ಕೈಲಾಂಚ ಹೋಬಳಿಗೆ ಪಂಚರತ್ನ ಯಾತ್ರೆ ಆರಂಭವಾಗಿ ಕೆ.ಪಿ.ದೊಡ್ಡಿ, ಅಚ್ಚಲು, ಅವ್ವೇರಹಳ್ಳಿ ಗೇಟ್ ನಲ್ಲಿ ಮಿಂಚಿನ ಸಂಚಾರ ಕೈಗೊಳ್ಳಲಿದೆ. ನಂತರ ಹಾರೋಹಳ್ಳಿ ತಾಲೂಕಿಗೆ ರಥಯಾತ್ರೆ ಕಾಲಿಡಲಿದೆ. ಆನಂತರ ಚಿಕ್ಕಮುದವಾಡಿ, ಕೊಟ್ಟಗಾಳು, ಚೀಲೂರು, ಕೊಳ್ಳಿಗನಹಳ್ಳಿ, ಟಿ.ಹೊಸಳ್ಳಿ, ತೋಪಸಂದ್ರ, ಹಾರೋಹಳ್ಳಿ, ಮರಳವಾಡಿಯಲ್ಲಿ ಪಂಚರತ್ನ ರಥಯಾತ್ರೆ ಸಂಚಾರ ನಡೆಸಲಿದೆ.
Ramanagara: Pancharatna Rath Yatra reached by former CM HDK Karmabhoomi….