ಕೊರೊನಾ ಭೀತಿಯಿಂದ ರಾಮನವಮಿ ಆಚರಣೆಗೂ ತಟ್ಟಿದೆ. ಮಾರ್ಚ್ 25 ರಿಂದ ಏಪ್ರಿಲ್ 2ರ ನಡುವೆ ಅಯೋಧ್ಯೆಯಲ್ಲಿ ವಿಜೃಂಭಣೆಯಿಂದ ಆಚರಿಸಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ಹರಡುವಿಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ರಾಮನವಮಿ ಆಚರಣೆಯನ್ನು ರದ್ದುಗೊಳಸಿಲಾಗಿದೆ. ಈ ಬಗ್ಗೆ ನಿನ್ನೆಯಷ್ಟೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, ಈ ಸಲ ರಾಮನವಮಿಯನ್ನು ನಿಮ್ಮ ಮನೆಗಳಲ್ಲಿಯೇ ಆಚರಿಸಿ ಎಂದು ಮನವಿ ಮಾಡಿದ್ದರು.
ರಾಮನವಮಿ ಆಚರಣೆಯನ್ನು ರದ್ದುಗೊಳಸಿದ ವಿಚಾರವನ್ನು ಅಯೊಧ್ಯೆಯ ರಾಮ ಜನ್ಮಭೂಮಿ ನ್ಯಾಸ್ ಸದಸ್ಯ ಮಹಾಂತ್ ಕಲ್ಯಾಣ್ ದಾಸ್ ಖಚಿತಪಡಿಸಿದ್ದಾರೆ. ಚೈತ್ರ ನವಮಿ ಎಂದು ಆಚರಿಸಲಾಗುವ ಹಬ್ಬದ ಸಂದರ್ಭದಲ್ಲಿಯೇ ಮೂಲ ಬಾಲರಾಮನ ಮೂರ್ತಿಯನ್ನು, ರಾಮಮಂದಿರ ನಿರ್ಮಾಣದ ಸ್ಥಳದಿಂಧ ಬೇರೆಡೆಗೆ ಶಿಫ್ಟ್ ಮಾಡುವ ಸಾಧ್ಯತೆ ಕೂಡ ಇತ್ತು. ಅಲ್ಲದೆ ಸಾವಿರಾರು ಭಕ್ತರು ಅಯೋಧ್ಯೆಯಲ್ಲಿ ರಾಮನವಮಿ ಆಚರಣೆಗೆ ಜಮಾಯಿಸುವ ನಿರೀಕ್ಷೆ ಇತ್ತು. ಇದೀಗ ಈ ಉತ್ಸವವನ್ನು ರದ್ದುಗೊಳಿಸಲಾಗಿದೆ.








