Ramcharan : RRR ಇಂಟ್ರೋ ಸೀನ್ ಒಂದಕ್ಕೇ 35 ದಿನಗಳು ಶೂಟಿಂಗ್..!!
ನಟ ರಾಮ್ ಚರಣ್ RRR ಚಿತ್ರದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ..
ಸಿನಿಮಾದಲ್ಲಿ ಅವರ ಇಂಟ್ರೋ ದೃಶ್ಯ ಸಿಕ್ಕಾಪಟ್ಟೆ ಕಮ್ರೇಜ್ ಹುಟ್ಟುಹಾಕಿ ಪ್ರೀತಿ ಗಳಿಸಿತ್ತು.. 35 ದಿನಗಳು ಇದೊಂದೇ ಸೀನ್ ಶೂಟಿಂಗ್ ಗೆ ತೆಗೆದುಕೊಂಡಿತ್ತು ಎಂದಿದ್ದಾರೆ..
ಅವರಿಗೆ ಅಲರ್ಜಿಯಿದ್ದರೂ , ಸೈನಸ್ ಸರ್ಜರಿ ಮಾಡಿಸಿಕೊಂಡಿದ್ದರೂ ಅವರು ಹೆಚ್ಚು ಸಮಯ ಧೂಳಿನಲ್ಲಿ ಕೆಲಸ ಮಾಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ನಾವು ಸುಮಾರು 3000 ರಿಂದ 4000 ಜನರೊಂದಿಗೆ 35 ದಿನಗಳ ಕಾಲ ದೃಶ್ಯವನ್ನು ಚಿತ್ರೀಕರಿಸಿದ್ದೇವೆ. ನನಗೆ ಬಾಲ್ಯದಿಂದಲೂ ಧೂಳಿನ ಅಲರ್ಜಿ ಇತ್ತು, ವಾಸ್ತವವಾಗಿ, ನಾನು ಸೈನಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ನನ್ನ ಹಣೆಬರಹ ನೋಡಿ, ನಾನು 35 ದಿನಗಳ ಕಾಲ ಧೂಳಿನಲ್ಲಿ ಕೆಲಸ ಮಾಡಬೇಕಾಯಿತು ಎಂದಿದ್ದಾರೆ..