Ramcharan : ‘ಈ ವ್ಯಕ್ತಿ ಗ್ಲೋಬಲ್ ಸ್ಟಾರ್ ‘ – ಆನಂದ್ ಮಹೀಂದ್ರ
ರಾಮ್ ಚರಣ್ RRR ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ..
RRR ಸಿನಿಮಾ ವಿಶ್ವಾದ್ಯಂತ ಸೌಂಡ್ ಮಾಡ್ತಾ ಇದೆ.
ಹಾಲಿವುಡ್ ನಲ್ಲಿ ಪ್ರತಿಷ್ಠತ ಅವಾರ್ಡ್ ಗಳನ್ನ ಪಡೆದು ವಿಶ್ವಾದ್ಯಂತ ಸುದ್ದಿಯಲ್ಲಿದ್ದು ಇದು ಭಾರತೀಯರಿಗೆ ಹೆಮ್ಮೆಯ ವಿಚಾರವೂ ಆಗಿದೆ..
ಸದ್ಯ RRR ತಂಡವು ವಿದೇಶದಲ್ಲೇ ಬೀಡು ಬಿಟ್ಟಿದೆ. ರಾಮ್ ಚರಣ್ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇದೇ ರೀತಿಯೇ ಅವರು ಭಾಗಿಯಾಗಿದ್ದ ಸಂದರ್ಶನದ ತುಣಕನ್ನ ಹಂಚಿಕೊಂಡಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ರಾಮ್ ಚರಣ್ ರನ್ನ ಗ್ಲೋಬಲ್ ಸ್ಟಾರ್ ಎಂದೇ ಕರೆದಿದ್ದಾರೆ.
ಎಬಿಸಿ ನಡೆಸಿದ ಜಿಎಂಎ3 ಕಾರ್ಯಕ್ರಮದಲ್ಲಿ ರಾಮ್ ಚರಣ್ ಅವರು ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ‘ನಾಟು ನಾಟು’ ಹಾಡಿನ ಬಗ್ಗೆ ಚರ್ಚೆ ನಡೆದಿದೆ. ರಾಮ್ ಚರಣ್ಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಾಮ್ ಚರಣ್ ಅವರು ‘ಇದು ಆರಂಭ ಮಾತ್ರ’ ಎಂದಿದ್ದರು.
ಈ ವಿಡಿಯೋ ಸಖತ್ ವೈರಲ್ ಆಗಿದೆ.
10 ಲಕ್ಷಕ್ಕೂ ಅಧಿಕ ಬಾರಿ ವಿಡಿಯೋ ವೀಕ್ಷಣೆ ಕಂಡಿದೆ. ಈ ವಿಡಿಯೋನ ರೀಟ್ವೀಟ್ ಮಾಡಿಕೊಂಡಿರುವ ಆನಂದ್ ಮಹಿಂದ್ರಾ ಅವರು
ಈ ವ್ಯಕ್ತಿ ಗ್ಲೋಬಲ್ ಸ್ಟಾರ್ ಎಂದು ರಾಮ್ ಚರಣ್ ಅವರನ್ನು ಕರೆದಿದ್ದಾರೆ.
ಅವರ ಈ ಟ್ವೀಟ್ ಗೆ ಉತ್ತರಿಸಿರುವ ರಾಮ್ ಚರಣ್, ಧನ್ಯವಾದ. ಎಲ್ಲಾ ಕ್ಷೇತ್ರಗಳಲ್ಲಿ ಮಿಂಚಲು ಇದು ಭಾರತದ ಸಮಯ ಎಂದಿದ್ದಾರೆ. ಈ ಟ್ವೀಟ್ ಸಂಭಾಷಣೆ ಸದ್ಯ ವೈರಲ್ ಆಗುತ್ತಿದೆ.