ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ಬಾರ್ದು : ಬಾಲಚಂದ್ರ
1 min read
ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ಬಾರ್ದು : ಬಾಲಚಂದ್ರ
ಬೆಂಗಳೂರು : ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಅನ್ನೋ ವಿಚಾರ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಅವರ `ಆ’ ವಿಡಿಯೋಗಳು ಕೂಡ ಎಲ್ಲೆಡೆ ಹರಿದಾಡುತ್ತಿವೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅನ್ನೋ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಈ ಬಗ್ಗೆ ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಬಾರದು. ಪ್ರಕರಣದ ತನಿಖೆಯ ಬಳಿಕವಷ್ಟೇ ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ.
ಸಿಎಂ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ದೆಹಲಿಗೆ ಹೋಗಲ್ಲ, ಇಲ್ಲೇ ಬೆಂಗಳೂರಲ್ಲೇ ಇರ್ತಾರೆ. ಸಿಡಿಯಲ್ಲಿದ್ದ ಯುವತಿ ಯಾರು ಅಂತ ಗೊತ್ತಾಗಬೇಕಿದೆ. ಇದೊಂದು ನಕಲಿ ವಿಡಿಯೋ ಅಂತ ತನಿಖೆಗೆ ಸಿಎಂಗೆ ಒತ್ತಾಯಿಸಿದ್ದೇವೆ. ಇದು ನಿಜ ಆಗಿದ್ರೆ ರಮೇಶ್ ಜಾರಕಿಹೊಳಿಗೆ ನಿವೃತ್ತಿ ತೆಗೆದುಕೊಳ್ಳಲು ಹೇಳ್ತೀನಿ. ವಕೀಲರ ಜೊತೆ ಮಾತನಾಡಿ 100ಕೋಟಿ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದು ತಿಳಿಸಿದರು.
ಇನ್ನು ಈ ವಿಡಿಯೋ ಯೂ ಟ್ಯೂಬ್ ನಲ್ಲಿ ದುಬೈನಲ್ಲಿ ಅಪ್ ಲೋಡ್ ಆಗಿದೆ ಅಂತಾರೆ. ಇದು ಸಿಐಡಿ ಸಿಒಡಿ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದ ಬಾಲಚಂದ್ರ ಜಾರಕಿಹೊಳಿ, ಬಿಜೆಪಿಯವರು ರಿಲೀಸ್ ಮಾಡಿಸಿಲ್ಲ. ಬದಲಾಗಿ ಪ್ರಭಾವಿ ರಾಜಕಾರಣಿ ಇದ್ದಾರೆ. ಸಿಡಿ ರಿಲೀಸ್ ಮಾಡಿದವರ ವಿರುದ್ಧ ನೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕಲು ನಿರ್ಧರಿಸುತ್ತೇವೆ. ತನಿಖೆ ಆಗಲೇ ಬೇಕು. ಯಾವುದೇ ಕಾರಣಕ್ಕೂ ರಮೇಶ್ ರಾಜೀನಾಮೆ ಕೊಡಬಾರದು. ತನಿಖೆಯಾದ ನಂತರ ರಾಜೀನಾಮೆ ಕೊಟ್ಟು ಹೊರ ಹೋಗಲಿ ಎಂದು ತಿಳಿಸಿದರು.
