ಜನ ನಮ್ಮನ್ನ ಥೂ..ಛೀ.. ಅಂತ ಉಗಿತ್ತಿದ್ದಾರೆ : ಡಿ.ಕೆ. ಶಿವಕುಮಾರ್

1 min read
Ramesh-jarakiholi

ಜನ ನಮ್ಮನ್ನ ಥೂ..ಛೀ.. ಅಂತ ಉಗಿತ್ತಿದ್ದಾರೆ : ಡಿ.ಕೆ. ಶಿವಕುಮಾರ್

ಬೆಂಗಳೂರು : ನಾವು ರಾಜಕಾರಣಿಗಳು ಅಂತಾ ಹೇಳಿಕೊಳ್ಳೋಕೆ ನಮಗೆ ಅಸಹ್ಯವಾಗುತ್ತಿದೆ. ಇವತ್ತು ಜನ ನಮ್ಮನ್ನ ಥೂ ಛೀ ಅಂತಾ ಉಗಿತ್ತಿದ್ದಾರೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.

ಜನಧ್ವನಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಈ ದಿನ ರಾಜಕಾರಣಿಗಳಿಗೆ ಅಸಹ್ಯವಾಗುತ್ತಿದೆ. ನಾವು ರಾಜಕಾರಣಿಗಳು ಅಂತಾ ಹೇಳಿಕೊಳ್ಳುವುದಕ್ಕೆ ಅಸಹ್ಯವಾಗುತ್ತಿದೆ. ಫ್ಯಾಮಿಲಿ, ಮಕ್ಕಳು ಹೇಗೆ ನೋಡ್ತಾರೆ ಅನ್ನೋದೆ ನನ್ನ ವ್ಯøಥೆ. ಇವತ್ತು ಜನ ನಮ್ಮನ್ನ ಥೂ..ಛೀ.. ಅಂತ ಉಗಿತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Ramesh-jarakiholi

ಇನ್ನು ವಿಡಿಯೋದಲ್ಲಿ ರಮೇಶ್ ಜಾರಕೊಹೊಳಿ ಯಡಿಯೂರಪ್ಪನವರು ಭ್ರಷ್ಟ ಅಂತಾ ಹೇಳಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿ, ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ ನಡೆದಿದೆ. ಹೀಗಾಗಿ ಅವರ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ ಅಂತ ತಿಳಿಸಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd