ADVERTISEMENT
Tuesday, February 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಮುಲು ಸಂಧಾನ ಸಕ್ಸಸ್ ಆಯ್ತಾ..? ಸಿಎಂ ಯಡಿಯೂರಪ್ಪ ಹೇಳಿದ ಕಿವಿಮಾತೇನು..!

Kariyappa N by Kariyappa N
October 13, 2020
in Newsbeat, Politics, Samagra karnataka, ರಾಜ್ಯ
bsy sandhana
Share on FacebookShare on TwitterShare on WhatsappShare on Telegram

ಬೆಂಗಳೂರು: ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಖಾತೆಯನ್ನೂ ವಾಪಸ್ ಪಡೆದು ರೆಕ್ಕೆಪುಕ್ಕ ಕಟ್ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಚಿವ ಬಿ.ಶ್ರೀರಾಮುಲು ಅಸಮಾಧಾನಗೊಂಡಿದ್ದರು. ಆದರೆ, ಇಂದು ಶ್ರೀರಾಮುಲು ಹಾಗೂ ಡಾ.ಕೆ ಸುಧಾಕರ್‍ ರನ್ನು ಅಕ್ಕ-ಪಕ್ಕ ಕೂರಿಸಿಕೊಂಡು ಯಡಿಯೂರಪ್ಪ ಸಂಧಾನ(Ramulu bsy Negotiation) ನಡೆಸಿದ್ದಾರೆ. ಶ್ರೀರಾಮುಲು ಸಂಧಾನ ಸಕ್ಸಸ್ ಆಗಿದೆ, ಸಂತೋಷ್‍ದಿಂದಲೇ ಸಮಾಜ ಕಲ್ಯಾಣ ಇಲಾಖೆ ವಹಿಸಿಕೊಂಡಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಂಡರೂ ಅವರ ಹೇಳಿಕೆಗಳಲ್ಲೇ ಅಸಮಾಧಾನ ಎದ್ದು ಕಾಣುತ್ತಿತ್ತು.

ramulu-sudhakar
ಈಗ ಉಪಚುನಾವಣೆ ಸಮೀಪದಲ್ಲಿದೆ, ಜತೆಗೆ ಕೊರೊನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಹೊರಗಡೆ ಹಾಗೂ ಮತದಾರರಿಗೆ ಕೆಟ್ಟ ಸಂದೇಶ ಹೋಗಬಾರದು. ಹೀಗಾಗಿ ಅಸಮಾಧಾನ ಮರೆತು ಒಟ್ಟಿಗೆ ಕೆಲಸ ಮಾಡಿ ಎಂದು ಸಿಎಂ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ. ಸಿಎಂ ಸಲಹೆಗೆ ಬೇರೆ ದಾರಿ ಇಲ್ಲದೆ ತಲೆಯಾಡಿಸಿದ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ನಿಭಾಯಿಸಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts

ಬ್ರಾಹ್ಮಣರು ತಯಾರಿಸಿದ ಹಪ್ಪಳ ಅಂದಿದ್ಕೆ ಇಷ್ಟೆಲ್ಲಾ ರಾದ್ಧಾಂತವೇ?ಜಾಲತಾಣದಲ್ಲಿ ಹಪ್ಪಳ ಪಾಲಿಟಿಕ್ಸ್ ಬಲು ಜೋರು

ಬ್ರಾಹ್ಮಣರು ತಯಾರಿಸಿದ ಹಪ್ಪಳ ಅಂದಿದ್ಕೆ ಇಷ್ಟೆಲ್ಲಾ ರಾದ್ಧಾಂತವೇ?ಜಾಲತಾಣದಲ್ಲಿ ಹಪ್ಪಳ ಪಾಲಿಟಿಕ್ಸ್ ಬಲು ಜೋರು

February 3, 2026
ನಿರ್ಮಾಪಕರು ಅನ್ನದಾತರಲ್ಲ HERO ಗೆ ಕಾಂಡೋಮ್ ಸಪ್ಲೈಯರ್ಸ್ ಎಂದ್ರ ಚಂದ್ರಚೂಡ್ ಫುಲ್ ಗರಂ ಆದ ನಿರ್ಮಾಪಕರ ಸಂಘ

ನಿರ್ಮಾಪಕರು ಅನ್ನದಾತರಲ್ಲ HERO ಗೆ ಕಾಂಡೋಮ್ ಸಪ್ಲೈಯರ್ಸ್ ಎಂದ್ರ ಚಂದ್ರಚೂಡ್ ಫುಲ್ ಗರಂ ಆದ ನಿರ್ಮಾಪಕರ ಸಂಘ

February 3, 2026

ರಾಮುಲು-ಸುಧಾಕರ್ ಮುಖಾಮುಖಿ ಮಾಡಿದ್ದೇಕೆ..?
ಆರೋಗ್ಯ ಇಲಾಖೆಯನ್ನು ತಮ್ಮಿಂದ ಕಸಿದುಕೊಂಡು ಸಚಿವ ಸುಧಾಕರ್‍ಗೆ ಹೆಚ್ಚುವರಿಯಾಗಿ ನೀಡಿದ್ದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನಗೊಂಡಿದ್ದರು. ನಿನ್ನೆಯೂ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದ ಸಚಿವ ಶ್ರೀರಾಮುಲು ತಮ್ಮ ಅಸಮಾಧಾನ ಹೊರಹಾಕಿದ್ದರು. ಮತ್ತೆ ಸಂಜೆ ಬಾ ಮಾತನಾಡೋಣ ಎಂದು ಹೇಳಿ ಯಡಿಯೂರಪ್ಪ ಅವರು ಶ್ರೀರಾಮುಲು ಅವರನ್ನು ಕಳಿಸಿದ್ದರು.
ಆದರೆ, ಇಂದು ಬೆಳಿಗ್ಗೆ ಸಿಎಂ ನಿವಾಸ ಕಾವೇರಿಗೆ ಶ್ರೀರಾಮುಲು ಹೋಗುವುದರೊಳಗೆ ಸಚಿವ ಸುಧಾಕರ್ ಬಂದು ಕುಳಿತಿದ್ದರು. ತಮಗೂ ಮೊದಲೇ ಸುಧಾಕರ್ ಜತೆ ಬಂದಿರುವುದು ರಾಮುಲುಗೆ ಶಾಕ್ ಕಾದಿತ್ತು. ಇಬ್ಬರನ್ನು ಅಕ್ಕಪಕ್ಕ ಕೂರಿಸಿಕೊಂಡ ಸಿಎಂ ಯಡಿಯೂರಪ್ಪ ಸಂಧಾನ ಮಾಡಿ ಕಿವಿ ಮಾತು ಹೇಳಿ ಕಳಿಸಿದ್ದಾರೆ.


ಒಬ್ಬರನ್ನೇ ಪ್ರತ್ಯೇಕವಾಗಿ ಮಾತನಾಡಿಸಿದರೆ ಬೇರೆಯವರ ಬಗ್ಗೆ ದೂರು ಹೇಳಿ ಅಸಮಾಧಾನ ಹೇಳಿಕೊಳ್ಳುವುದೇ ಆಗುತ್ತದೆ. ಹೀಗಾಗಿ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿದರೆ ಸಮಸ್ಯೆ ಸುಲಭವಾಗಿ ಬಗೆಹರಿಯಲಿದೆ. ಶ್ರೀರಾಮುಲು ಮೃದು ಸ್ವಭಾದವರಾದ ಕಾರಣ ಎದುರು ಬದುರು ಕೂರಿಸಿಕೊಂಡು ಮಾತನಾಡಿದರೆ ನನ್ನ ಮಾತು ತಳ್ಳಿ ಹಾಕಲ್ಲ. ಈ ಲೆಕ್ಕಚಾರದಿಂದಲೇ ಈ ಪ್ರಯತ್ನ ನಡೆಸಿದ ಸಿಎಂ ಯಡಿಯೂರಪ್ಪ ಅವರು ಶ್ರೀರಾಮುಲು-ಸುಧಾಕರ್ ಅವರನ್ನು ಮುಖಾಮುಖಿ ಮಾಡಿಸಿದ್ದು ಎನ್ನಲಾಗಿದೆ. ಆದರೆ, ಈ ಸಂಧಾನದ ಮೂಲಕ ಸಚಿವ ಸುಧಾಕರ್ ಸಿಎಂ ಮೇಲೆ ಒತ್ತಡ ಹೇರಿ ತಮ್ಮ ಪ್ರಭಾವ ಬೀರುವಲ್ಲಿ ಯಶಸ್ವಿಯಾದ್ರಾ ಎಂಬ ಮಾತುಗಳೂ ರಾಜ್ಯ ರಾಜ್ಯಕೀಯದಲ್ಲಿ ಕೇಳಿ ಬರುತ್ತಿವೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: bs yadiyurappaDr. K Sudhakarhealth departmetsiriramulu
ShareTweetSendShare
Join us on:

Related Posts

ಬ್ರಾಹ್ಮಣರು ತಯಾರಿಸಿದ ಹಪ್ಪಳ ಅಂದಿದ್ಕೆ ಇಷ್ಟೆಲ್ಲಾ ರಾದ್ಧಾಂತವೇ?ಜಾಲತಾಣದಲ್ಲಿ ಹಪ್ಪಳ ಪಾಲಿಟಿಕ್ಸ್ ಬಲು ಜೋರು

ಬ್ರಾಹ್ಮಣರು ತಯಾರಿಸಿದ ಹಪ್ಪಳ ಅಂದಿದ್ಕೆ ಇಷ್ಟೆಲ್ಲಾ ರಾದ್ಧಾಂತವೇ?ಜಾಲತಾಣದಲ್ಲಿ ಹಪ್ಪಳ ಪಾಲಿಟಿಕ್ಸ್ ಬಲು ಜೋರು

by Shwetha
February 3, 2026
0

ನಮ್ಮದು ಜಾತ್ಯತೀತ ರಾಷ್ಟ್ರ, ನಾವೆಲ್ಲ ಒಂದೇ ಎನ್ನುವ ಮಾತುಗಳು ಕೇವಲ ಭಾಷಣಕ್ಕೆ ಸೀಮಿತವೇ? ಅಡುಗೆ ಮನೆಯ ಹಪ್ಪಳದ ವಿಚಾರದಲ್ಲೂ ಜಾತಿಯ ಭೂತ ಎದ್ದು ಕುಳಿತಿದೆಯಾ? ಹೌದು, ಈಗ...

ನಿರ್ಮಾಪಕರು ಅನ್ನದಾತರಲ್ಲ HERO ಗೆ ಕಾಂಡೋಮ್ ಸಪ್ಲೈಯರ್ಸ್ ಎಂದ್ರ ಚಂದ್ರಚೂಡ್ ಫುಲ್ ಗರಂ ಆದ ನಿರ್ಮಾಪಕರ ಸಂಘ

ನಿರ್ಮಾಪಕರು ಅನ್ನದಾತರಲ್ಲ HERO ಗೆ ಕಾಂಡೋಮ್ ಸಪ್ಲೈಯರ್ಸ್ ಎಂದ್ರ ಚಂದ್ರಚೂಡ್ ಫುಲ್ ಗರಂ ಆದ ನಿರ್ಮಾಪಕರ ಸಂಘ

by Shwetha
February 3, 2026
0

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಭಾರಿ ವಿವಾದದ ಬಿರುಗಾಳಿ ಎದ್ದಿದೆ. ಸದಾ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಲ್ಲಿರುವ ನಟ ನಿರ್ದೇಶಕ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ...

ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ: ಹನೂರು ತಾಲ್ಲೂಕಿನಲ್ಲಿ ಆತಂಕ

ಫ್ಲೋರೈಡ್‌ ಮಿಶ್ರಿತ ನೀರು ಕುಡಿದು 47 ಮಂದಿಗೆ ಕಿಡ್ನಿ ವೈಫಲ್ಯ: ಹನೂರು ತಾಲ್ಲೂಕಿನಲ್ಲಿ ಆತಂಕ

by Shwetha
February 3, 2026
0

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಮತ್ತು ಸುಳ್ಳಾಡಿ ಗ್ರಾಮಗಳಲ್ಲಿ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆ ಬಹಿರಂಗವಾಗಿದೆ. ಗ್ರಾಮ ಪಂಚಾಯತ್ ಮೂಲಕ ಸರಬರಾಜಾಗುತ್ತಿರುವ ಫ್ಲೋರೈಡ್‌ ಮಿಶ್ರಿತ ಕುಡಿಯುವ...

ಅಜಿತ್ ಪವಾರ್ ಸಾವು ಅನುಮಾನಾಸ್ಪದ: ವಿಮಾನ ದುರಂತಕ್ಕೆ ತನಿಖೆ ಅಗತ್ಯ- ಸಂಜಯ್ ರಾವತ್ ಆಗ್ರಹ

ಅಜಿತ್ ಪವಾರ್ ಸಾವು ಅನುಮಾನಾಸ್ಪದ: ವಿಮಾನ ದುರಂತಕ್ಕೆ ತನಿಖೆ ಅಗತ್ಯ- ಸಂಜಯ್ ರಾವತ್ ಆಗ್ರಹ

by Shwetha
February 3, 2026
0

ಮಹಾರಾಷ್ಟ್ರದ ದಿವಂಗತ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವು ಬಗ್ಗೆ ಅನುಮಾನವಿದೆ ಎಂದು ಶಿವಸೇನೆ ಸಂಸದೆ ಸಂಜಯ್ ರಾವತ್ ಗಂಭೀರ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊರಬಂದ...

ಕುರುಬ ಸಮುದಾಯಕ್ಕೆ ST ಸ್ಥಾನಮಾನ: ಕೇಂದ್ರಕ್ಕೆ ಶಿಫಾರಸು ಸಲ್ಲಿಸಿದ್ದೇವೆ – ಸಿಎಂ ಸಿದ್ದರಾಮಯ್ಯ

ಕುರುಬ ಸಮುದಾಯಕ್ಕೆ ST ಸ್ಥಾನಮಾನ: ಕೇಂದ್ರಕ್ಕೆ ಶಿಫಾರಸು ಸಲ್ಲಿಸಿದ್ದೇವೆ – ಸಿಎಂ ಸಿದ್ದರಾಮಯ್ಯ

by Shwetha
February 3, 2026
0

ಕುರುಬ ಸಮುದಾಯವನ್ನು ST ಪಟ್ಟಿಗೆ ಸೇರಿಸುವ ಕುರಿತು ಮಹತ್ವದ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಸಂಬಂಧ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜ್ಯ ಸರ್ಕಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram