ಮೋದಿಯವರದ್ದು ಕೇವಲ ಬಾಯಿ ಮಾತಿನ ದಲಿತ ಪ್ರೀತಿ ಅಷ್ಟೇ : ಸುರ್ಜೇವಾಲಾ
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಯಾವ ರಾಜ್ಯಗಳಲ್ಲೂ ದಲಿತ ಮುಖಂಡರನ್ನು ಮಖ್ಯಮಂತ್ರಿ ಮಾಡಿಲ್ಲ. ಅವರದ್ದು ಕೇವಲ ಬಾಯಿ ಮಾತಿನ ದಲಿತ ಪ್ರೀತಿ ಅಷ್ಟೇ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕಿಡಿಕಾರಿದ್ದಾರೆ.
ಸಿಂದಗಿ ಉಪಚುನಾವಣೆ ಪ್ರಚಾರಕ್ಕೆ ತೆರಳಲು ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ತೈಲ ಬೆಲೆ, ಅನಿಲ ಬೆಲೆ, ಅಗತ್ಯ ವಸ್ತುಗಳ ಬೆಲೆ ನೋಡಿದರೆ ಜನರನ್ನು ಹೇಗೆ ಲೂಟಿ ಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.