ನಿವೃತ್ತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರನ್ನು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರದ ನಿರ್ಧಾರ ಮತ್ತು ರಂಜಯ್ ಗೋಗೊಯ್ ಬಗ್ಗೆ ಪರ ವಿರೋಧ ವಾದಗಳು ಕೇಳಿಬರುತ್ತಿದ್ದು, ಈ ಕುರಿತು ಅಸ್ಸಾಂನಲ್ಲಿ ರಂಜನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಪ್ರಮಾಣವಚನ ತಗೆದುಕೊಳ್ಳುತ್ತೇನೆ. ಆ ನಂತರ ನಾನು ಏಕೆ ರಾಜ್ಯಸಭಾ ಸ್ಥಾನವನ್ನು ಒಪ್ಪಿಕೊಂಡೆ ಎಂಬುದನ್ನು ಮಾಧ್ಯಮಗಳ ಮುಂದೆ ಹೇಳುತ್ತೇನೆ. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ರಾಜ್ಯಸಭೆಯಲ್ಲಿ ನ್ಯಾಯಾಂಗವನ್ನು ಪ್ರತಿನಿಧಿಸುವ ಅದ್ಭುತ ಅವಕಾಶ ಸಿಕ್ಕಿದೆ. ಆ ನಂತರವೇ ನಾನು ಈಗಿನ ವಿವಾದಗಳಿಗೆ ಉತ್ತರಿಸುತ್ತೇನೆ ಎಂದರು.
ನಿನ್ನೆಯಷ್ಟೇ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ರಂಜನ್ ಗೊಗಯ್ ಅಂತಹ ಲಜ್ಜಿಗೇಡಿ ಮನುಷ್ಯನನ್ನು ನಾನು ನನ್ನ ಜೀವಮಾನದಲ್ಲಿಯೇ ನೋಡಿರಲಿಲ್ಲ ಎಂದು ರಂಜನ್ ಗೊಗಯ್ ಅವರ ರಾಜ್ಯ ಸಭೆ ನಾಮನಿರ್ದೇಶನ ವಿರೋಧಿಸಿದ್ದರು.