ಮಗಳ ಸಾವಿನ ನಡುವೆಯೂ ಸೆಂಚುರಿ ಬಾರಿಸಿದ ಸೋಲಂಕಿ….
ಸಮರ್ಪಣಾ ಮನೋಭಾವ, ಆಟದ ಮೇಲಿನ ಶ್ರದ್ಧೆ ಮತ್ತು ಉತ್ಸಾಹದಿಂದಾಗಿ ಕ್ರಿಕೆಟಿಗನೊಬ್ಬ ಎಲ್ಲರ ಗಮನ ಸೆಳೆದಿದ್ದಾನೆ. ಬರೋಡಾ ಮತ್ತು ಚಂಡೀಗಢ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ವಿಷ್ಣು ಸೋಲಂಕಿಗೆ ಇಡೀ ವಿಶ್ವವೇ ನಮನ ಸಲ್ಲಿಸುತ್ತಿದೆ.
ಬರೋಡಾ ಪರ ರಣಜಿ ಟ್ರೋಫಿ ಆಡುತ್ತಿರುವ ವಿಷ್ಣು ಸೋಲಂಕಿ ಪುತ್ರಿ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ಮಗಳ ಅಂತ್ಯಸಂಸ್ಕಾರದ ಬಳಿಕ ಪಂದ್ಯ ಆಡಲು ಹೋಗಿ ಭರ್ಜರಿ ಶತಕ ಬಾರಿಸಿದ್ದಾರೆ. ಸೋಲಂಕಿ ಶತಕದಿಂದಾಗಿ ಬರೋಡಾ ತಂಡ ಚಂಡೀಗಢ ವಿರುದ್ಧ ದೊಡ್ಡ ಮೊತ್ತದ ಮುನ್ನಡೆ ಸಾಧಿಸಿದೆ.
ವಿಷ್ಣು ಇತ್ತೀಚೆಗಷ್ಟೇ ತಂದೆಯಾಗಿದ್ದರು. ಮನೆಯಲ್ಲಿ ಸಂತಸದ ವಾತಾವರಣವಿತ್ತು. ಆದರೆ, ಈ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ನವಜಾತ ಹೆಣ್ಣು ಮಗಳು ಇಹಲೋಕ ತ್ಯಜಿಸಿದ್ದಾಳೆ. ವಿಷ್ಣು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಂತರ ನೇರವಾಗಿ ಪಂದ್ಯ ಆಡಲು ತೆರಳಿದ್ದಾರೆ. ಈ ರಣಜಿ ಋತುವಿನಲ್ಲಿ ಇದು ಅವರ ಮೊದಲ ಪಂದ್ಯವಾಗಿತ್ತು. ಮ್ಯಾಚ್ ನಲ್ಲಿ ಅತ್ಯುತ್ತಮ ಶತಕ ಬಾರಿಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ಮುನ್ನಡೆಸಿದ್ದಾರೆ. ಬರೋಡಾ ಪಂದ್ಯ ಗೆಲ್ಲುವ ಸನಿಹದಲ್ಲಿದೆ.
ವಿರಾಟ್ ಕೊಹ್ಲಿಯೂ ಈ ರೀತಿ ನಡೆದುಕೊಂಡಿದ್ದರು.
ರಣಜಿ ಪಂದ್ಯವೊಂದರಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೀವನಲ್ಲೂ ಈ ರೀತಿಯ ಘಟನೆ ನಡೆದಿತ್ತು. ದೆಹಲಿ ತಂಡದ ಪರ ಆಡುತ್ತಿದರು. ಅವರ ತಂಡ ಸೋಲಿನ ಭೀತಿಯಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ತಂದೆ ತೀರಿಕೊಂಡಿದ್ದರು. ಇಂಥಹ ಕಠಿಣ ಪರಿಸ್ಥಿತಿಯ ಹೊರತಾಗಿಯೂ ಬ್ಯಾಟಿಂಗ್‌ಗೆ ಆಗಮಿಸಿದ ವಿರಾಟ್ ಉತ್ತಮ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಇದಾದ ನಂತರ ಕೊಹ್ಲಿ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬರೋಡಾಗೆ ಬಲ ತುಂಬಿದ ವಿಷ್ಣು
ಈ ರಣಜಿ ಪಂದ್ಯದಲ್ಲಿ ವಿಷ್ಣು 161 ಎಸೆತಗಳಲ್ಲಿ 103 ರನ್ ಗಳಿಸಿ ಆಡುತ್ತಿದ್ದಾರೆ. ಇದುವರೆಗೆ 12 ಬೌಂಡರಿಗಳನ್ನು ಬಾರಿಸಿ 63.98 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
ಚಂಡೀಗಢದ ಮೊದಲ ಇನ್ನಿಂಗ್ಸ್ 168 ರನ್‌ಗಳಿಗೆ ಕೊನೆಗೊಂಡಿತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಬರೋಡಾ 300 ರನ್‌ಗಳ ಗುರಿಯನ್ನು ನೀಡುವ ಮೂಲಕ ಚಂಡೀಗಢದ ವಿರುದ್ಧ ಇನಿಂಗ್ಸ್ ಅಂತರದಿಂದ ದೊಡ್ಡ ಗೆಲುವು ಸಾಧಿಸಲು ಬಯಸುತ್ತಿದೆ.
Ranji Trophy Vishnu Solanki Baroda