ಟಿ20 ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಇದಕ್ಕೂ ಮುನ್ನ ಐಸಿಸಿ ನೂತನ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. 20 ತಂಡಗಳ ಈ ಶ್ರೇಯಾಂಕ ಪಟ್ಟಿಯಲ್ಲಿ ಭಾರತವೇ ಅಂಗ್ರ ಸ್ಥಾನ ಅಲಂಕರಿಸಿದೆ.
ಟಿ20 ವಿಶ್ವಕಪ್ ಗೆಲ್ಲುವ ತಂಡಗಳ ಪೈಕಿ ಭಾರತ ಮುಂಚೂಣಿಯಲ್ಲಿದೆ. ಇಂಡಿಯಾ ತಂಡ 264 ಅಂಕಗಳೊಂದಿಗೆ ಟಿ20 ತಂಡಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.
ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ದ್ವಿತೀಯ ಸ್ಥಾನದಲ್ಲಿದ್ದು, ಒಟ್ಟು 257 ಅಂಕ ಹೊಂದಿದೆ. ಮೂರನೇ ಸ್ಥಾನದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವಿದ್ದು, ಒಟ್ಟು 254 ಅಂಕ ಗಳಿಸಿದೆ. 252 ಅಂಕಗಳನ್ನು ಹೊಂದಿರುವ ವೆಸ್ಟ್ ಇಂಡೀಸ್ ತಂಡ 4ನೇ ಸ್ಥಾನದಲ್ಲಿದೆ. 250 ಅಂಕ ಹೊಂದಿರುವ ನ್ಯೂಜಿಲೆಂಡ್ ತಂಡ ಶ್ರೇಯಾಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಭಾರತದ ಬದ್ಧ ವೈರಿ ಪಾಕ್ 244 ಅಂಕಗಳನ್ನು ಹೊಂದಿದ್ದು, 6ನೇ ಸ್ಥಾನದಲ್ಲಿದೆ. 244 ಅಂಕಗಳನ್ನು ಹೊಂದಿರುವ ಸೌತ್ ಆಫ್ರಿಕಾ ತಂಡ ನೂತನ ಶ್ರೇಯಾಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಶ್ರೀಲಾಂಕ ತಂಡ 232 ಅಂಕಗಳನ್ನು ಹೊಂದಿದ್ದು, ಟಿ20 ತಂಡಗಳ ನೂತನ ಶ್ರೇಯಾಂಕದಲ್ಲಿ 8ನೇ ಸ್ಥಾನದಲ್ಲಿದೆ. ಬಾಂಗ್ಲಾ 9ನೇ ಸ್ಥಾನ, ಅಫ್ಘಾನ್ 10ನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ಐರ್ಲೆಂಡ್, ಜಿಂಬಾಂಬ್ವೆ, ನಮೀಬಿಯಾ, ಸ್ಕಾಟ್ಲೆಂಡ್, ನೆದರ್ಲ್ಯಾಂಡ್ಸ್, ಯುಎಇ, ನೇಪಾಳ, ಯುಎಸ್ಎ, ಒಮಾನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳು ಕ್ರಮವಾಗಿ 20ರವರೆಗೆ ಸ್ಥಾನದಲ್ಲಿವೆ. ಈ ಶ್ರೇಯಾಂಕ ಪಟ್ಟಿ ಭಾರತ ತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ನೀಡುತ್ತಿದೆ.