ಬೆಂಗಳೂರಿನ ಕಬ್ಬನ್ ಪಾರ್ಕ್ (Cubbon Park) ಪೊಲೀಸ್ ಠಾಣೆಯಲ್ಲಿ ತೆಲಂಗಾಣ (Telangan) ಕಾಂಗ್ರೆಸ್ ನಾಯಕ (Congress Leader) ಕುಂಭಂ ಶಿವಕುಮಾರ್ ರೆಡ್ಡಿ (K Shivakumar Reddy) ವಿರುದ್ಧ ಅತ್ಯಾಚರ ಪ್ರಕರಣವೊಂದು ದಾಖಲಾಗಿದೆ.
ತೆಲಂಗಾಣ ನಾರಾಯಣ್ ಪೇಟ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಕುಂಭಂ ಶಿವಕುಮಾರ್ ರೆಡ್ಡಿ ವಿರುದ್ಧವೇ ಪ್ರಕರಣ ದಾಖಲಾಗಿದೆ. ಹೊಟೇಲ್ ಒಂದರಲ್ಲಿ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಶಿವಕುಮಾರ್ ರೆಡ್ಡಿ 2018ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ನಾರಾಯಣ್ ಪೇಟ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
2020ರಲ್ಲೂ ಕೆ.ಶಿವಕುಮಾರ ರೆಡ್ಡಿ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. 2020ರಲ್ಲಿ ಶಿವಕುಮಾರ್ ರೆಡ್ಡಿ 45 ವರ್ಷದ ಮಹಿಳೆಯೊಬ್ಬರೊಂದಿಗೆ ಪರಿಚಯವಾಗಿದ್ದರು. ಈ ವೇಳೆ ಶಿವಕುಮಾರ್ ರೆಡ್ಡಿ ತನ್ನನ್ನು ಮದುವೆಯಾಗುವಂತೆ ಮಹಿಳೆ ಎದರು ಪ್ರಸ್ತಾಪ ಇಟ್ಟಿದ್ದ ಎನ್ನಲಾಗಿದೆ.
ಆಗ ಮಹಿಳೆ, ಮೊದಲ ಪತ್ನಿ ಬಗ್ಗೆ ವಿಚಾರಿಸಿದಾಗ “ನನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಮತ್ತು ಮೂರು ವರ್ಷಗಳಿಗಿಂತ ಹೆಚ್ಚು ಬದುಕುಳಿಯುವುದಿಲ್ಲ. ಅವಳನ್ನು ನೋಡಿಕೊಳ್ಳಲು ಒಬ್ಬ ಮಹಿಳೆ ಬೇಕು” ಎಂದು ಹೇಳಿದ್ದ ಎನ್ನಲಾಗಿದೆ. ಆಗ ಮದುವೆಯಾಗಿದ್ದಾರೆ. ಬಳಿಕ ಶಿವಕುಮಾರ್ ರೆಡ್ಡಿ, ಮಹಿಳೆಯನ್ನು ಪಂಜಗುಟ್ಟದ ಪ್ರತಿಷ್ಟಿತ ಸ್ಟಾರ್ ಹೋಟೆಲ್‌ಗೆ ಕರೆದು, ಅನುಮತಿ ಇಲ್ಲದೆ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ನಂತರ ಮಹಿಳೆಯ ನಗ್ನ ಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ನಾನು ಹೇಳಿದಂತೆ ಕೇಳದೆ ಇದ್ದರೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.