ಶಾಕಿಂಗ್ : ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಅರ್ಚಕ
ರಾಜಸ್ಥಾನ : ರಾಜಸ್ಥಾನದಲ್ಲೊಂದು ಶಾಕಿಂಗ್ ಘಟನೆ ನಡೆದಿದೆ.. ಅರ್ಚಕನೊಬ್ಬ ತನ್ನ ಸಂಬಂಧಿಯೇ ಆದ ವಿವಾಹಿತ ಮಹಿಳೆಗೆ ಮತ್ತು ಬರುವ ವಸ್ತು ನೀಡಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.. ಅರ್ಚಕನಿಗೆ 36 ವರ್ಷ ವಯಸ್ಸಾಗಿದ್ದು ಈತನಿಗೆ ನಾಲ್ವರು ಮಕ್ಕಳಿದ್ದಾರೆ. ಜೈಚಂದ್ ಪುರದ ಗ್ರಾಮದಲ್ಲಿನ ದೇವಾಲಯಕ್ಕೆ ಪೂಜೆಗಾಗಿ ಮಹಿಳೆಯು ತನ್ನ ಪತಿ ಹಾಗೂ ತಂದೆಯೊಂದಿಗೆ ತೆರಳಿದ್ದರು.. ಆದ್ರೆ ಪೂಜಾರಿ ಆಕೆಯ ತಂದೆ ಹಾಗೂ ಪತಿಯನ್ನ ಯಾವುದೋ ಕೆಲಸದ ನೆಪ ಹೇಳಿ ಅಲ್ಲಿಂದ ದೂರ ಕಳುಹಿಸಿದ್ದಾನೆ.. ಇತ್ತ ಮಹಿಳೆಗೆ ಮತ್ತು ಬರುವ ಪದಾರ್ಥ ನೀಡಿ ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ..
ಬಳಿಕ ಮಾರನೇ ದಿನ ಆಕೆಯನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಮನೆಗೆ ಬಿಟ್ಟುಬಂದಿದ್ದಾನೆ.. ಆದ್ರೆ ಮಹಿಳೆಯು ತನ್ನ ಕುಟುಂಬಸ್ಥರಿಗೆ ಸತ್ಯ ತಿಳಿಸಿದ್ದಾಲೆ.. ಬಳಿಕ ಆಕ್ರೋಶಗೊಂಡ ಕುಟುಂಬಸ್ಥರು ಅರ್ಚಕನನ್ನ ಹಿಡಿಯಲು ಯತ್ನಿಸಿದ್ದಾರೆ.. ಆದ್ರೆ ಅಷ್ಟ್ರಲ್ಲೇ ಆತ ಪರಾರಿಯಾಗಿದ್ದ.. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.. ಇದಾದ ನಂತರ ಪೊಲೀಸರು ವಿಶೇಷ ತಂಡ ರಚಿಸಿ ಅರ್ಚಕನಿಗಾಗಿ ಹುಡುಕಾಟ ನಡೆಸಿದ್ದಾರೆ.. ಈತ ವಿರಾಟ ನಗರ ಬೆಟ್ಟದ ಸಣ್ಣ ದೇವಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದ ವಿಚಾರ ತಿಳಿದು ಅಲ್ಲಿಗೆ ಹೋಗಿ ಆತನನ್ನ ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾಬುಲ್ : ತಾಲೀಬಾನಿಗಳಿಂದ ಕಿಡ್ನ್ಯಾಪ್ ಆಗಿದ್ದ 150 ಭಾರತೀಯರು ರಿಲೀಸ್…?








