ಬಾಲಕಿಗೆ ಗುಟ್ಕಾ ತರಲಿಕ್ಕೆ ಹೇಳಿ ಕಂಟೈನರ್ ನ ಒಳಗೆ ಅತ್ಯಾಚಾರವೆಸಗಿದ ಕೀಚಕ..!
ಭೋಪಾಲ್ : ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಗೆ ಗುಟ್ಕಾ ತರಲಿಕ್ಕೆ ಕಳುಹಿಸಿ, ಬಳಿಕ ಆಕೆಯ ಮೇಲೆ ಮುನ್ಸಿಪಲ್ ಕಂಟೈನರ್ ನ ಒಳಗೆ ಅತ್ಯಾಚಾರವೆಸಗಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ. 32 ವರ್ಷದ ಗುಜರಾತ್ ಮೂಲದ ವ್ಯಕ್ತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಆತನನ್ನ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ಅಲ್ಲಿಗೆ ಬಂದಿದ್ದ ಅಪರಿಚಿತ ವ್ಯಕ್ತಿ ಆಕೆಗೆ ಹತ್ತಿರದ ಅಂಗಡಿಯಿಂದ ಗುಟಕಾ ತರುವಂತೆ ಹೇಳಿದ್ದಾನೆ. ಬಾಲಕಿಯು ವಾಪಸ್ ಬಂದು ಗುಟಕಾ ನೀಡಲಿಕ್ಕೆ ಹೋದಾಗ ಆಕೆಯನ್ನ ಎಳೆದೊಯ್ದು ಕಂಟೈನರ್ ನೊಳಗೆ ಅತ್ಯಾಚಾರವೆಸಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಬಳಿಕ ಮಾಸಿಕವಾಗಿ ಆಘಾತಕ್ಕೆ ಒಳಗಾಗಿದ್ದ ಬಾಲಕಿ ತನ್ನ ಮನೆಯವರ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಬಳಿಕ ಆಕೆಯ ಅಜ್ಜಿ ಪೊಲೀಸ್ ಠಾಣೆಗೆ ತೆರಳಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ನಂತರ ಆರೋಪಿಯ ಬಂಧನಕ್ಕೆ 8 ಟೀಂ ಗಳ ರಚನೆ ಮಾಡಿ ಕಾರ್ಯಾಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ.
ಮೊದಲಿಗೆ 40 ಜನ ಅನುಮಾನಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದ ಪೊಲೀಸರು ಸಂತ್ರಸ್ತೆಯನ್ನ ಕರೆಸಿ ಆರೋಪಿನ್ನ ಗುರುತಿಸುವಂತೆ ತಿಳಿಸಿದ್ದಾರೆ. ಈ ವೇಳೆ ಸಂತ್ರಸ್ತೆಯು ಆರೋಪಿಯನ್ನ ಗುರುತಿಸಿದ್ದು, ಆತನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆತನ ಪತ್ನಿ ಆತನನ್ನ ಬಿಟ್ಟು ಹೋಗಿದ್ದ ವಿಚಾರ ಗೊತ್ತಾಗಿದೆ. ಅಪರಾಧದ ಬಳಿಕ ಆತ ಗುಜರಾತ್ ಗೆ ಪರಾರಿಯಾಗಲು ತಯಾರಿ ನಡೆಸಿದ್ದ ಎನ್ನಲಾಗಿದೆ. ಆದ್ರೆ ಅಷ್ಟರಲ್ಲೇ ಆತ ಸಿಕ್ಕಿಬಿದ್ದಿದ್ದಾನೆ.
ಮಾಂತ್ರಿಕನ ಮಾತು ಕೇಳಿ ನೀಚ ಕೆಲಸ ಮಾಡಿದ ಕಿರಾತಕಿ… 3 ವರ್ಷದ ಪುಟ್ಟ ಕಂದಮ್ಮನ ಕೊಲೆ..!
ಚಿಕ್ಕಪ್ಪನ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಕೀಚಕ..!
ಧಾನ್ಯದ ಡಬ್ಬದಲ್ಲಿ ಸಿಲುಕಿದ್ದ 5 ಪುಟಾಣಿ ಮಕ್ಕಳ ದುರಂತ ಸಾವು..!