2.5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ : 29 ದಿನಗಳಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ತೀರ್ಪು ನೀಡಿದ ಕೋರ್ಟ್..!
ಉತ್ತರಪ್ರದೇಶ: ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ 2.5 ವರ್ಷದ ಮಗುವಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ವಿಶೇಷ ಪೋಕ್ಸೋ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಪ್ರಕರಣ ನಡೆದ ತಿಂಗಳ ನಂತರ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿಚಾರಣೆ ಆರಂಭವಾದ ನಂತರ, ಕೇವಲ 29 ದಿನಗಳಲ್ಲಿ ಆರೋಪಿಗೆ ಗಲ್ಲು ವಿಧಿಸಿದೆ.
ಹೊಸ ಅವತಾರದಲ್ಲಿ ಮಾರುಕಟ್ಟೆಗೆ ‘ರಾಯಲ್ ಎನ್ಫೀಲ್ಡ್’ ರಾಯಲ್ ಆಗಿ ಎಂಟ್ರಿ…!
ಅಕ್ಟೋಬರ್ 19ರಂದು ಸಂತ್ರಸ್ತ ಬಾಲಕಿಯ ಕುಟುಂಬದವರು, ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಲು ಕವಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು. ಕುಟುಂಬ ಸದಸ್ಯರ ಅನುಮಾನದ ಮೇರೆಗೆ ಪೊಲೀಸರು, ಸಂತ್ರಸ್ತೆಯ ತಂದೆಗೆ ಆಪ್ತರಾಗಿದ್ದ ಚಂದನ್ ಪಾಂಡೆ ಅವರನ್ನು ವಿಚಾರಣೆ ನಡೆಸಿ, ಅದೇ ದಿನ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ಬಾಲಕಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರ ದಿಕ್ಕು ತಪ್ಪಿಸುತ್ತಿದ್ದ. ಬಾಲಕಿ ಕಾಣೆಯಾದ ಎರಡನೇ ದಿನ ಮಧ್ಯಾಹ್ನ, ಕವಿ ನಗರ ಕೈಗಾರಿಕಾ ಪ್ರದೇಶದ ಚರಂಡಿಯ ಬದಿಯ ಪೊದೆಯಲ್ಲಿ ಆಕೆಯ ಮೃತದೇಹವು ಪತ್ತೆಯಾಗಿತ್ತು. ಇದಾದ ಬಳಿಕ ಆರೋಪಿ ಚಂದನ್ ತಪ್ಪೊಪ್ಪಿಕೊಂಡಿದ್ದ.
ಶತಕದತ್ತ ಪೆಟ್ರೋಲ್ ಬೆಲೆ : ಯಾರು ಕಮಕ್ ಕಿಮಕ್ ಎನ್ನುತ್ತಿಲ್ಲವೇಕೆ..?
ಬಾಲಕಿಯ ತಂದೆಯ ಆಪ್ತ ಸ್ನೇಹಿತ ಚಂದನ್ ಎಂಬಾತ ಅಪರಾಧಿ ಎಂದು ಸಾಬೀತಾಗಿದ್ದು, ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ. ತೀರ್ಪು ನೀಡುವ ಮುನ್ನ 10 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಪರಾಧ ನಡೆದ ಕೂಡಲೇ ಆರೋಪಿಯನ್ನು ಬಂಧಿಸಿ ಡಿಸೆಂಬರ್ 29ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ತಂದೆಗೆ ಊಟ ಕೊಡಲು ತೆರಳಿದ್ದ ಬಾಲಕಿ ಮೇಲೆ ಅತ್ಯಚಾರ, ಕೊಲೆ : ಘಟನೆಯಲ್ಲಿ 4 ವರ್ಷದ ಮಗು ಸಾವು
ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್..!
ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ ಬಾಲಕಿಯ ವಿರುದ್ಧವೇ ಕೇಸ್ ದಾಖಲಿಸಿದ ಪೊಲೀಸರು – ಕಾರಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








