ಪುಣೆ : ವಿವಾಹಿತ ಟಿಕ್ಕಿ ಮೇಲೆ ಕ್ಯಾಬ್ ಚಾಲಕನಿಂದ ಅತ್ಯಾಚಾರ..!
ಪುಣೆ : ಟೆಕ್ಕಿ ಮಹಿಳೆಯ ಮೇಲೆ ಕ್ಯಾಬ್ ಚಾಲಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರ ಪುಣೆಯ ಮುಂಧಾವಾ ಪ್ರದೇಶದ ಬಳಿ ಬೆಳಕಿಗೆ ಬಂದಿದೆ. ಅತ್ಯಾಚಾರವೆಸಗಿದ ಬಳಿಕ ಆಕೆಯ ಅಶ್ಲೀಲ ಫೋಟೋಗಳನ್ನ ಸೆರೆಹಿಡಿದು ತನ್ನೊಂದಿಗೆ ಲೈಂಗಿಕ ಸಂಬಂಧ ಬೆಳಸುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ. ಮಾರ್ಚ್ ನಲ್ಲಿಯೇ ಈ ಘಟನೆ ನಡೆದಿದ್ದು, ಇದೀಗ 32 ವರ್ಷದ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ
ಮಹಿಳೆಯು ಮೊದಲಿಗೆ ಕೆಲಸ ಮುಗಿದ ಬಳಿಕ ತನ್ನ ಸ್ನೇಹಿತರನ್ನು ಭೇಟಿ ಮಾಡಲು ಕ್ಯಾಬ್ ಬುಕ್ ಮಾಡಿದ್ದರು. ಬಳಿಕ ಆಕೆಯನ್ನ ಪಿಕ್ ಮಾಡಿದ್ದ ಕ್ಯಾಬ್ ಚಾಲಕ ಆಕೆಯನ್ನ ಡ್ರಾಪ್ ಮಾಡಿದ ಬಳಿಕ ಮಡೆಸೇಜ್ ಮಾಡಿದ್ದ. ಗ್ರಾಹಕರು ಸಿಗುವುದು ಬಹಳ ಕಷಷ್ಟವಾಗಿದೆ. ಮತ್ತೆ ಕ್ಯಾಬ್ ಬೇಕಿದ್ರೆ ನನಗೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ. ಹೀಗಾಗಿ ಮಹಿಳೆ ಗೆಳೆಯರ ಜೊತೆಗೆ ಗೆಟ್ ಟುಗೆದರ್ ಪಾರ್ಟಿ ಮಾಡಿದ ನಂತರ ಮತ್ತದೇ ಕ್ಯಾಬ್ ಚಾಲಕನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.
ಈ ವೇಳೆ ಕ್ಯಾಬ್ ಗೆ ಹತ್ತಿದ್ದ ಮಹಿಳೆಗೆ ಚಾಲಕ ನಿದ್ರಾಹೀನತೆ ಮದ್ದು ಬರೆಸಿದ್ದ ನೀರು ನೀಡಿದ್ದಾನೆ. ನೀರು ಕುಡಿದ ಮಹಿಳೆಯು ಪ್ರಜ್ಞೆ ತಪ್ಪಿದ್ದಾಳೆ. ನಂತರ ಆಕೆಯನ್ನ ಲಾಡ್ಜ್ ಗೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ಫೋಟೋಗಳನ್ನ ಸೆರೆ ಹಿಡಿದಿದ್ದಾನೆ. ಮಹಿಳೆಗೆ ಎಚ್ಚರವಾದಾಗ ಆಘತವಾಗಿದೆ. ಅಲ್ಲಿಂದ ಚಾಲಕ ನಿರಂತರವಾಗಿ ಮಹಿಳೆಗೆ ತನ್ನ ಜೊತೆ ಲೈಂಗಿಕ ಸಂಬಂಧ ಬೆಳೆಸುವಂತೆ ಬ್ಲಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾನೆ.
ಇಲ್ಲದೇ ಹೋದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡುವುದಾಗಿಯೂ ಧಮ್ಕಿ ಹಾಕುತ್ತಿದ್ದ. ಕಾಮುಕನ ಹಿಂಸೆ ತಾಳಲಾರದೇ ಕೊನೆಗೂ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.