ಕೃಷಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..!
ಹಾವೇರಿ : ಕೃಷಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕನೊಬ್ಬ ತನ್ನ ಕ್ಯಾಬಿನ್ ನಲ್ಲಿ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಈ ಘಟನೆ ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿಯಲ್ಲಿ ಬೆಳಕಿಗೆ ಬಂದಿದೆ.
ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಕೃಷಿ ಮಹಾವಿದ್ಯಾಲಯದ ಸಹಾಯಕ ಅಧ್ಯಾಪಕನ ಮೇಲೆ ದೂರು ದಾಖಲಿಸಿದ್ದಾಳೆ. ಈತ 2019 ರಿಂದ ವಿದ್ಯಾರ್ಥಿನಿಗೆ ಬೆದರುಸುತ್ತಾ ನನಗೆ ಸಹರಿಸದೇ ಹೋದ್ರೆ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಾ ತನ್ನ ಚೇಂಬರ್ ನಲ್ಲಿಯೇ ಅತ್ಯಾಚಾರ ಎಸಗಿರುವುದಾಗಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.
ಅಲ್ದೇ ಲಾಕ್ ಡೌನ್ ವೇಳೆ ಯುವತಿಯನ್ನ ಹಾವೇರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಂದೆ ಹೇರ್ ಕಟ್ ಮಾಡಿಸಿಕೊಳ್ಳುವಂತೆ ಗದರಿದ್ದಕ್ಕೆ ಮಗ ಹೀಗಾ ಮಾಡೋದು..!
ಲಾರಿಯ ಇಂಜಿನ್ ಗೆ ತಗುಲಿದ ಬೆಂಕಿ : ಲಾರಿಯಲ್ಲೇ ಚಾಲಕ ಸಜೀವ ದಹನ
ಪೊಲೀಸ್ ವಾಹನದ ಮೇಲೆ ಡ್ರಗ್ ಗ್ಯಾಂಗ್ ಗುಂಡಿನ ದಾಳಿ : 13 ಅಧಿಕಾರಿಗಳ ಹತ್ಯೆ..!








